ಮಂಗಳೂರು, ಡಿಸೆಂಬರ್ 14 : ಮಂಗಳೂರಿನ ಡ್ರಗ್ಸ್ ಪೆಡ್ಲರ್ ಗಳಿಗೆ ಬೆಂಗಳೂರಿನಿಂದ ಎಂಡಿಎಂಎ ಡ್ರಗ್ಸ್ ತಂದು ಸಪ್ಲೈ ಮಾಡುತ್ತಿದ್ದ ತಂಡವನ್ನು ಮಂಗಳೂರು ನಗರದ ಸಿಸಿಬಿ ಘಟಕದ ಅಧಿಕಾರಿಗಳು ಡಿಸೆಂಬರ್ 13 ರಂದು ಅರೆಸ್ಟ್ ಮಾಡಿದ್ದಾರೆ.


ಬಂಧಿತರನ್ನು ಮಲ್ಲೂರು ನಿವಾಸಿ ಅಹಮ್ಮದ್ ಶಾಬೀತ್ (35), ಬಂಟ್ವಾಳ ಜೋಡುಮಾರ್ಗ ನಿವಾಸಿ ಮಹಮ್ಮದ್ ಶಂಶೀರ್ (36) ಮತ್ತು ಸರಪಾಡಿ ನಿವಾಸಿ ಶ್ರೀಮತಿ ನೌಶೀನ (27) ಬಂಧಿತರು.‌

ಅಹಮ್ಮದ್ ಶಾಬೀತ್ ಎಂಬುವನು ಮಂಗಳೂರಿನ ಡ್ರಗ್ ಪೆಡ್ಲರ್ ಗಳಿಗೆ ನಿರಂತರವಾಗಿ ಬೆಂಗಳೂರಿನಿಂದ ಮಾದಕ ವಸ್ತುವಾದ MDMA ಯನ್ನು ತಂದು ಸರಬರಾಜು ಮಾಡುತ್ತಿದ್ದು, ಅಲ್ಲದೇ ಈ ತಂಡದಲ್ಲಿ ಯಾರಿಗೂ ಅನುಮಾನ ಬಾರದಂತೆ ಮಹಿಳೆಯಾದ ನೌಶಿನ ಎಂಬವರನ್ನು ಜೊತೆಗೆ ಇರಿಸಿಕೊಂಡು ಮಾದಕ ವಸ್ತುವಾದ MDMA ಯನ್ನು ಸಾಗಾಟ ಮಾಡುತ್ತಿರುವುದ್ದನ್ನು, ಮಂಗಳೂರು ನಗರದ ಸಿಸಿಬಿ ಘಟಕದ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗಳು ಖಚಿತ ಮಾಹಿತಿಯನ್ನು ಕಲೆ ಹಾಕಿ, ಈ ತಂಡವನ್ನು ಈ ದಿನ ದಸ್ತಗಿರಿ ಮಾಡಿರುತ್ತಾರೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿತರಿಗೆ ನ್ಯಾಯಾಂಗ ಬಂಧನವಾಗಿರುತ್ತದೆ.
ಬಂಧಿತರಿಂದ 90 ಗ್ರಾಂ MDMA ಮಾದಕ ವಸ್ತು ಮೌಲ್ಯ, ಬಿಳಿ ಬಣ್ಣದ KL-58-W-6342 ಮಾರುತಿ ಸ್ವಿಪ್ಟ್ ಕಾರು ಮತ್ತು ಮೊಬೈಲ್ ಪೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ.

Share Information