Connect with us

    LATEST NEWS

    ಶಬರಿಮಲೆ ಬೆಟ್ಟ ಹತ್ತಲು ಯತ್ನಿಸಿದ್ದ 10 ಮಹಿಳೆಯರನ್ನು ತಡೆದ ಕೇರಳ ಪೊಲೀಸರು

    ಶಬರಿಮಲೆ ಬೆಟ್ಟ ಹತ್ತಲು ಯತ್ನಿಸಿದ್ದ 10 ಮಹಿಳೆಯರನ್ನು ತಡೆದ ಕೇರಳ ಪೊಲೀಸರು

    ಕೇರಳ ನವೆಂಬರ್ 16: ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತಂತೆ ಸುಪ್ರೀಂಕೋರ್ಟ್ ಪರಿಶೀಲನಾ ಅರ್ಜಿಯನ್ನು ವಿಸ್ತ್ರತ ಪೀಠಕ್ಕೆ ರವಾನಿಸಿದ ನಡುವೆಯೇ ಶಬರಿಮಲೆಯಲ್ಲಿ 41 ದಿನಗಳ ವಾರ್ಷಿಕ ಯಾತ್ರೆ ಪ್ರಾರಂಭವಾಗಿದೆ. ಈ ನಡುವೆಯೇ ನಿಷೇಧಿತ ವಯಸ್ಸಿನ 10 ಜನ ಮಹಿಳೆಯರು ಶಬರಿಮಲೆಗೆ ತೆರಳಲು ಹೊರಟಿದ್ದು ಈ ಮಹಿಳೆಯರನ್ನು ಪೊಲೀಸರು ವಾಪಾಸ್ ಕಳುಹಿಸಿದ್ದಾರೆ.

    ಶಬರಿಮಲೆಯಲ್ಲಿ ವಾರ್ಷಿಕ ಯಾತ್ರೆ ಆರಂಭವಾಗಿದೆ. ಶಬರಿಮಲೆ ದೇವಾಲಯದ ಬಾಗಿಲು ಇಂದು ಸಂಜೆ 5ಕ್ಕೆ ತೆರೆಯಲಾಗಿದ್ದು, ಈಗಾಗಲೇ ಭಕ್ತರು ಅಯ್ಯಪ್ಪನ ದರ್ಶನ ಪಡೆಯುತ್ತಿದ್ದಾರೆ. 41ದಿನಗಳ ವಾರ್ಷಿಕ ಯಾತ್ರೆಯ ಮೊದಲನೇ ದಿನವಾದ ಇಂದು ಅನೇಕ ಭಕ್ತರು ದೇವಾಲಯಕ್ಕೆ ತೆರಳಿದ್ದಾರೆ. ದೇಗುಲದ ಸುತ್ತಮುತ್ತ ಬಿಗಿ ಭದ್ರತೆ ವ್ಯವಸ್ಥೆಯನ್ನು ಕೇರಳ ಸರ್ಕಾರ ಮಾಡಿದೆ.

    ಪಂಪಾ ನದಿ ತಟದ ಶಿಬಿರದಿಂದ ದೇಗುಲಕ್ಕೆ ತೆರಳಲು ಚಾರಣ ಪ್ರಾರಂಭ ಮಾಡಿದ ಈ ನಡುವೆ ಆಂದ್ರಪ್ರದೇಶದಿಂದ ಬಂದ 10 ಮಹಿಳೆಯರ ಬಳಿ ವಯಸ್ಸಿನ ಪುರಾವೆ ಕೇಳಿದ ಪೊಲಿಸರು 10 ಜನ ಮಹಿಳೆಯರನ್ನು ವಾಪಸ್​ ಕಳಿಸಿದ್ದಾರೆ. ಈ ಮಹಿಳೆಯರ ವಯಸ್ಸು 50ಕ್ಕಿಂತ ಕಡಿಮೆ ಇದ್ದಿದ್ದರಿಂದ ಪೊಲಿಸರು ಅವರನ್ನು ವಾಪಸ್​ ಕಳಿಸಿದ್ದಾರೆ.

    ಆದರೆ ಮಹಿಳೆಯರು ವಾಪಸ್​ ಹೋಗದೆ ಪೊಲೀಸರ ವಿರುದ್ಧವೇ ಮಾತಿಗೆ ಇಳಿದಿದ್ದಾರೆ. ಯಾವ ಕಾರಣಕ್ಕೂ 10-50 ವಯಸ್ಸಿನ ಮಹಿಳೆಯರನ್ನು ದೇಗುಲಕ್ಕೆ ಬಿಡಬಾರದು ಎಂದು ನಮಗೆ ಕಟ್ಟುನಿಟ್ಟಿನ ಆದೇಶ ಇರುವುದರಿಂದ ನಿಮ್ಮನ್ನು ಒಳಗೆ ಬಿಡಲು ಸಾಧ್ಯವೇ ಇಲ್ಲ ಎಂದು ಹೇಳಿದ ಪೊಲೀಸರು 10 ಜನ ಸ್ತ್ರೀಯರ ಪ್ರವೇಶವನ್ನು ತಡೆದಿದ್ದಾರೆ.

    ಈ ನಡುವೆ ಭೂಮಾತಾ ಬ್ರಿಗೇಡ್​ನ ತೃಪ್ತಿ ದೇಸಾಯಿ, ಚೆನ್ನೈ ಮೂಲದ ಮೈನಿತಿ ಸಂಗಮ್​ ಈ ಬಾರಿ ದೇವಾಲಯದಲ್ಲಿ ನಾವು ಪೂಜೆ ಸಲ್ಲಿಸುತ್ತೇವೆ ಎಂದು ಹೇಳಿಕೊಂಡಿದ್ದಾರೆ. ಅವರಿಬ್ಬರಲ್ಲದೆ ಸುಮಾರು 45 ಮಹಿಳೆಯರು ಅಯ್ಯಪ್ಪನ ದರ್ಶನಕ್ಕೆ ಆನ್​ಲೈನ್​ ಮೂಲಕ ಅನುಮತಿ ಕೋರಿದ್ದಾರೆ.

    ಕಳೆದ ಬಾರಿ ಪೊಲೀಸ್ ಬಲದೊಂದಿಗೆ ಮಹಿಳೆಯರನ್ನು ದರ್ಶನಕ್ಕೆ ಕರೆದೊಯ್ದಿದ್ದ ಕೇರಳ ಸರಕಾರ ಈ ಬಾರಿ ಜವಬ್ದಾರಿಯಿಂದ ತಪ್ಪಿಸಿಕೊಂಡಿದೆ. ಶಬರಿಮಲೆಗೆ ತೆರಳು ಆಸಕ್ತಿ ಇರುವ ನಿಷೇಧಿತ ವಯಸ್ಸಿನ ಮಹಿಳೆಯರಿಗೆ ಯಾವುದೇ ರೀತಿಯ ವಿಶೇಷ ಭದ್ರತೆ ನೀಡಲಾಗುವುದಿಲ್ಲ ಎಂದು ಈಗಾಗಲೇ ಕೇರಳ ಸರಕಾರ ಸ್ಪಷ್ಟಪಡಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply