ಮಂಗಳೂರಿನಲ್ಲಿ ಶಿವರಾತ್ರಿ ಜಾಗರಣೆಗೆ ಪೋಲೀಸರ ಅಡ್ಡಿ

ಮಂಗಳೂರು ಮಾರ್ಚ್ 5: ಹಿಂದುಗಳ ಅತ್ಯಂತ ಶ್ರದ್ಧಾಭಕ್ತಿಯ ಆಚರಣೆಯಾದ ಶಿವರಾತ್ರಿಗೆ ಪೋಲೀಸರೇ ಕಂಟಕರಾದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಕಾವೂರಿನಲ್ಲಿ ನಡೆದಿದೆ.

ಶಿವರಾತ್ರಿ ಹಿನ್ನಲೆಯಲ್ಲಿ ಫೆಬ್ರವರಿ 4 ರಂದು ಕಾವೂರಿನ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಜಾಗರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಯಕ್ಷಗಾನ ಹಾಗೂ ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ಮು ಈ ಹಿನ್ನಲೆಯಲ್ಲಿ ಆಯೋಜಿಸಲಾಗಿತ್ತು. ಆದರೆ ಈ ಕಾರ್ಯಕ್ರಮಗಳಿಗೆ ಕಾವೂರು ಪೋಲೀಸರು ತಡೆಯೊಡ್ಡಿದ್ದಾರೆ.

ಧ್ವನಿವರ್ಧಕ ಬಳಕೆಯಿಂದ ತೊಂದರೆಯಾಗುತ್ತಿದೆ ಎನ್ನುವ ಕಾರಣಕ್ಕೆ ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಕಾವೂರು ಪೋಲೀಸರಿಗೆ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಆದೇಶ ನೀಡಿದ್ದಾರೆ.

ಈ ಹಿನ್ನಲೆಯಲ್ಲಿ ಕ್ಷೇತ್ರಕ್ಕೆ ಪೋಲೀಸ್ ತಂಡದೊಂದಿಗೆ ಆಗಮಿಸಿದ ಕಾವೂರು ಪೋಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಕಾರ್ಯಕ್ರಮವನ್ನು ರದ್ದು ಮಾಡುವಂತೆ ಆವಾಝ್ ಹಾಕಿದ್ದಾರೆ.

ಹಿಂದೂಗಳ ಕಾರ್ಯಕ್ರಮವಾಗುವಾಗ ಮಾತ್ರವೇ ಪೋಲೀಸರಿಗೆ ಶಬ್ದ ಮಾಲಿನ್ಯವಾಗುವುದೋ, ಅಥವಾ ಇತರ ಧರ್ಮದವರ ಕಾರ್ಯಕ್ರಮಕ್ಕೂ ಆಗುತ್ತದೋ ಎನ್ನುವ ಪ್ರಶ್ನೆಯನ್ನೂ ಸ್ಥಳದಲ್ಲಿ ಸೇರಿದ್ದ ಭಕ್ತರು ಪೋಲೀಸರ ಮುಂದೆ ಎತ್ತಿದ್ದು ಇದಕ್ಕೆ ಪೋಲೀಸರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಹಿಂದುಗಳ ಕಾರ್ಯಕ್ರಮದಲ್ಲಿ ಧ್ವನಿವರ್ಧಕದ ಸಮಸ್ಯೆಯಾಗುವುದಾದರೆ, ರಾತ್ರಿ ಮಸೀದಿಗಳಲ್ಲಿ ಹಾಕುವ ಬಾಂಗ್ ನಿಂದಲೂ ತಮಗೆ ತೊಂದರೆಯಾಗುತ್ತಿದೆ ಈ ಬಗ್ಗೆಯೂ ಕ್ರಮ ಕೈಗೊಳ್ಳಬೇಕೆಂದು ಸ್ಥಳದಲ್ಲಿ ಸೇರಿದ್ದ ಜನ ಪೋಲೀಸರನ್ನು ಒತ್ತಾಯಿಸಿದ್ದಾರೆ.
ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ವೈ ಭರತ್ ಶೆಟ್ಟಿ ಸ್ಥಳಕ್ಕೆ ಆಗಮಿಸಿದರೂ ಲೆಕ್ಕಿಸದ ಪೋಲೀಸರು ಬಲವಂತವಾಗಿ ಕಾರ್ಯಕ್ರಮವನ್ನು ನಿಲ್ಲಿಸಿರುವುದಕ್ಕೆ ಭಾರೀ ವಿರೋದ ಕೇಳಿ ಬರಲಾರಂಭಿಸಿದೆ.

VIDEO

Facebook Comments

comments