Connect with us

DAKSHINA KANNADA

ವಿಡಿಯೋ ಮಾಡಲು ಹೋಗಿ ಕಾರಿನಡಿ ಬಿದ್ದ ಟ್ರಾಫಿಕ್ ಪೊಲೀಸ್

ಪುತ್ತೂರು ಮಾರ್ಚ್ 3: ವಾಹನ ತಪಾಸಣೆ ಸಂದರ್ಭ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಸ್ವಲ್ಪದರಲ್ಲೆ ಪ್ರಾಣಾಪಾಯದಿಂದ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯೊಬ್ಬರು ಪಾರಾಗಿದ್ದಾರೆ. ಘಟನೆಯ ವಿಡಿಯೋ ಈಗ ವೈರಲ್ ಆಗಿದೆ.


ಧರ್ಮಸ್ಥಳ ಸಮೀಪ ಈ ಘಟನೆ ನಡೆದಿದ್ದು, ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ವಾಹನ ತಪಾಸಣೆ ವೇಳೆ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯೊಬ್ಬರು ವಾಹನ ಚಾಲಕನೊಂದಿಗೆ ಚರ್ಚೆಯಲ್ಲಿ ನಿಂತಿದ್ದರು. ಈ ಸಂದರ್ಭ ಮತ್ತೊಬ್ಬ ಪೊಲೀಸ್ ಸಿಬ್ಬಂದಿ ವಾಹನ ಸವಾರನ ವಿಡಿಯೋ ಮಾಡಲು ಮುಂದಾದಾಗ, ರಸ್ತೆಯಲ್ಲಿ ಆಗಮಿಸುತ್ತಿದ್ದ ಕಾರಿಗೆ ಹೋಗಿ ಡಿಕ್ಕಿ ಹೊಡೆದು, ಕಾರಿನ ಚಕ್ರದ ಕೆಳಗೆ ಬಿದ್ದಿದ್ದಾರೆ.

ಕಾರು ನಿಧಾನವಾಗಿ ಚಲಿಸುತ್ತಿದ್ದರಿಂದ ಪೊಲೀಸ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೋಲೀಸ್ ಪಾರಾದ ವಿಡಿಯೋ ಇದೀಗ ವೈರಲ್ ಆಗಿದೆ.

https://youtu.be/HLDTZyM2mao