Connect with us

    DAKSHINA KANNADA

    ವ್ಯಕ್ತಿಯೊಬ್ಬನಿಗೆ ಮಕ್ಕಳೆದುರೇ ಅವಾಚ್ಯ ಶಬ್ದಗಳಿಂದ ಪೊಲೀಸರಿಂದ ನಿಂದನೆ : ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು

    ಉಪ್ಪಿನಂಗಡಿ: ಮಾಸ್ಕ್ ಹಾಕಿಲ್ಲ ಎಂದು ವ್ಯಕ್ತಿಯೊಬ್ಬನನ್ನು ಪೊಲೀಸರು ಆತನ ಮಕ್ಕಳೆದುರೇ ಕಾಲರ್ ಪಟ್ಟಿ ಹಿಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಕಡಬ ತಾಲೂಕಿನ ಆಲಂಕಾರು ಸಮೀಪ ನಡೆದಿದ್ದು, ಪೊಲೀಸರ ಈ ವರ್ತನೆ ವಿರುದ್ದ ಸ್ಥಳೀಯರು ಕಡಬ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.


    ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಆಲಂಕಾರು ಪೇಟೆ ಸಮೀಪ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದರು. ಈ ಸಮಯದಲ್ಲಿ ತನ್ನ ಮಕ್ಕಳೊಂದಿಗೆ ವ್ಯಕ್ತಿಯೊಬ್ಬ ದಾರಿಯಲ್ಲಿ ಬಂದಿದ್ದು, ಮಕ್ಕಳು ಮಾಸ್ಕ್ ಧರಿಸಿರಲಿಲ್ಲ ಎನ್ನಲಾಗಿದೆ. ಇವರನ್ನು ತಡೆದ ಕಡಬ ಪೊಲೀಸರು, ವ್ಯಕ್ತಿಯ ಕಾಲರ್ ಪಟ್ಟಿ ಹಿಡಿದು ಮಕ್ಕಳ ಎದುರಿನಲ್ಲೇ ಅವ್ಯಾಚ್ಯ ಶಬ್ದ ಬಳಸಿ ಅವಹೇಳನಕಾರಿಯಾಗಿ ನಿಂದಿಸಿದ್ದಾರೆ ಎನ್ನಲಾಗಿದೆ. ನಂತರ ಸ್ಥಳದಲ್ಲಿ ಗಲಾಟೆ ಆಗುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.


    ಘಟನೆ ಕುರಿತು ಮಾದ್ಯಮದ ಜೊತೆಗೆ ಮಾತನಾಡಿದ ಕಡಬ ಠಾಣಾಧಿಕಾರಿ ರುಕ್ಮ ನಾಯ್ಕ್, ನಾವು ವಾಹನ ತಪಾಸಣೆ ಮಾಡುವ ಸಮಯದಲ್ಲಿ ಮಕ್ಕಳೊಂದಿಗೆ ಬಂದ ವ್ಯಕ್ತಿಯೊಬ್ಬ ಮಾಸ್ಕ್ ಧರಿಸಿರಲಿಲ್ಲ, ಮಾತ್ರವಲ್ಲದೇ ಈ ವ್ಯಕ್ತಿ ಮದ್ಯಪಾನ ಮಾಡಿರುವ ಬಗ್ಗೆಯೂ ಅನುಮಾನ ಮೂಡಿತ್ತು. ಈ ಹಿನ್ನೆಲೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲು ಇಲಾಖೆ ವಾಹನಕ್ಕೆ ಹತ್ತುವಂತೆ ಸೂಚಿಸಿದೆ.


    ಆದರೆ, ಆತ ಸ್ಥಳದಲ್ಲಿ ಗಲಾಟೆ ಮಾಡಲು ಮುಂದಾಗಿದ್ದು, ಮಕ್ಕಳನ್ನು ನೋಡಿ ಮಾನವೀಯತೆ ದೃಷ್ಟಿಯಿಂದ ಆತನಿಗೆ ಎಚ್ಚರಿಕೆ ನೀಡಿ, ದಂಡ ವಿಧಿಸಿ ಕಳುಹಿಸಿದ್ದೇನೆಯೇ ಹೊರತು, ಯಾವುದೇ ಅವ್ಯಾಚ್ಯ ಪದಗಳನ್ನು ಬಳಸಿಲ್ಲ ಎಂದು ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply