Connect with us

LATEST NEWS

ಅನಗತ್ಯವಾಗಿ ತಿರುಗಾಡುತ್ತಿದ್ದ ಯುವಕನ ಮೇಲೆ ಪ್ರಕರಣ ದಾಖಲಿಸಿದ ಪೊಲೀಸರು

ಅನಗತ್ಯವಾಗಿ ತಿರುಗಾಡುತ್ತಿದ್ದ ಯುವಕನ ಮೇಲೆ ಪ್ರಕರಣ ದಾಖಲಿಸಿದ ಪೊಲೀಸರು

ಕುಂದಾಪುರ ಮಾರ್ಚ್ 26: ಕುಂದಾಪುರದಲ್ಲಿ ಅನಗತ್ಯವಾಗಿ ಬೇಕಾಬಿಟ್ಟಿ ಬೈಕಿನಲ್ಲಿ ಸುತ್ತಾಡುತ್ತಿದ್ದ ಯುವಕನಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

ಉಪ್ಪಿನಕುದ್ರು ನಿವಾಸಿ ವಿಶ್ವನಾಥ್ ತನ್ನ ಬೈಕಿನಲ್ಲಿ ಜಾಲಿ ರೈಡ್ ಮಾಡಿಕೊಂಡು ಕುಂದಾಪುರ ರಸ್ತೆಯಲ್ಲಿ ಸುತ್ತಾಡುತ್ತಿದ್ದನು. ಪೊಲೀಸರು ನಿಲ್ಲಿಸಿ ಬಸ್ಕಿ ಹೊಡೆಸಿದ್ದಾರೆ. ಆದರೂ ಕೇಳದೆ ಯುವಕ ವಿಶ್ವನಾಥ್ ಪೊಲೀಸರಿಗೆ ಉಡಾಫೆ ಮಾತಾಡಿದ್ದಾನೆ.

ವಿಶ್ವನಾಥ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಮಾಸ್ಕ್ ಹಾಕು ಎಂದು ಹೇಳಿದ್ದಕ್ಕೆ ಮೆಡಿಕಲ್‍ನಲ್ಲಿ ಮಾಸ್ಕ್ ಇಲ್ಲ ಎಂದಿದ್ದಾನೆ. ಕರ್ಚೀಫ್ ಕಟ್ಟಿಕೋ ಎಂದಾಗ ಕರ್ಚೀಫ್ ಖರೀದಿಸುವುದಕ್ಕೆ ನನ್ನ ಬಳಿ ಹಣ ಇಲ್ಲ ಎಂದು ಉಡಾಫೆ ಮಾತಾಡಿದ್ದಾನೆ. ಅಲ್ಲದೆ ಡಿಸಿಗೆ ಕರೆ ಮಾಡುತ್ತೇನೆ ಎಂದು ವಾಗ್ವಾದಕ್ಕಿಳಿದಿದ್ದಾನೆ.

ಯುವಕನ ಆಟಾಟೋಪ ನೋಡಿ ರೋಸಿ ಹೋದ ಅಧಿಕಾರಿಗಳು ನಾಲ್ಕು ಬಿಗಿದಿದ್ದಾರೆ. ಎಸ್‍ಐ ಹರೀಶ್ ನಾಯ್ಕ್ ಜೊತೆ ಜಗಳವಾಡಿದಾಗ ಅವರ ಕೋಪ ನೆತ್ತಿಗೇರಿದೆ. ನಾವೇನು ಇಲ್ಲಿ ಕತ್ತೆ ಕಾಯೋದಕ್ಕೆ ನಿಂತಿದೀವಾ? ನಿಮ್ಮ ಆರೋಗ್ಯಕ್ಕೆ ಹಗಲು ರಾತ್ರಿ ಕೆಲಸ ಮಾಡ್ತಿದ್ರೆ ಉಡಾಫೆ ತೋರಿಸ್ತೀಯಾ ಎಂದು ತರಾಟೆಗೆ ತೆಗೆದುಕೊಂಡರು.

ಅಲ್ಲದೆ ಉಡಾಫೆ ಮತ್ತು ಕಾನೂನು ಉಲ್ಲಂಘಿಸಿದ್ದಕ್ಕೆ ಕರ್ತವ್ಯ ನಿರತ ಎಸ್‍ಐ ಜೊತೆ ವಾಗ್ವಾದ ಮಾಡಿದ ಯುವಕನ ಮೇಲೆ ಸೆಕ್ಷನ್ 269, 353 ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.

Facebook Comments

comments