Connect with us

    LATEST NEWS

    ಗ್ಯಾಂಗ್ ರೇಪ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ 8 ಮಂದಿ ಬಂಧನ

    ಗ್ಯಾಂಗ್ ರೇಪ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ 8 ಮಂದಿ ಬಂಧನ

    ಪುತ್ತೂರು ಜುಲೈ 4: ಪುತ್ತೂರು ಖಾಸಗಿ ಕಾಲೇಜಿನ ವಿಧ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ಆರೋಪದಲ್ಲಿ 8 ಜನ ಆರೋಪಿಗಳನ್ನು ಪೊಲಿಸರು ಬಂಧಿಸಿದ್ದಾರೆ.

    ಬಂಧಿತರನ್ನು ಪುತ್ತೂರು ತಾಲೂಕಿನ ಕಸ್ಭಾ ಗ್ರಾಮದ ಮುರಳೀಧರ, ಮೋಹಿತ್‌ ಪಿಜಿ, ಅದ್ವಿತ್‌ ಕುಮಾರ್ ನಾಯ್ಕ್, ಕಬಕದ ಚಂದ್ರಶೇಖರ ಮಯ್ಯ, ಕಡಬ ಪೇಟೆಯ ಶ್ರೇಯಸ್‌, ಆರ್ಯಾಪು ಗ್ರಾಮದ ಪೂವಪ್ಪ ಕೆ, ಪವನ್ ಕುಮಾರ್ ಡಿ, ಕೊಳ್ತಿಗೆ ಗ್ರಾಮದ ಧ್ಯಾನ್‌ ಎ ಎನ್ ಎಂದು ಗುರುತಿಸಲಾಗಿದೆ.

    ಪುತ್ತೂರು ಖಾಸಗಿ ಕಾಲೇಜಿನ ವಿಧ್ಯಾರ್ಥಿನಿಯ ಗ್ಯಾಂಗ್ ರೇಪ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವುದನ್ನು ಮನಗಂಡು ಪುತ್ತೂರು ನಗರ ಠಾಣಾ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದರು.

    ಈ ಸಂದರ್ಭ ಪುತ್ತೂರಿನ ಖಾಸಗಿ ಕಾಲೇಜೊಂದರ ವಿಧ್ಯಾರ್ಥಿಯಾದ ಬಂಟ್ವಾಳ ನಿವಾಸಿ ಪ್ರಖ್ಯಾತ್ ಎಂಬಾತನು ತಾನು ತನ್ನ ಸ್ನೇಹಿತರೊಂದಿಗೆ ಸೇರಿ ನಡೆಸಿರುವ ಸಾಮೂಹಿಕ ಅತ್ಯಾಚಾರದ ವಿಡಿಯೋವನ್ನು ತನ್ನ ಮೊಬೈಲ್ ನ ಒಂದು ಅ್ಯಪ್ ನಲ್ಲಿ ಸ್ಟೇಟಸ್ ಹಾಕಿ ಕೊಂಡಿದ್ದ, ಈ ವಿಡಿಯೋವನ್ನು ಅದೇ ಕಾಲೇಜಿನ ಮೋಹಿತ್‌ ಎಂಬಾತನು ತನ್ನ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಂಡಿರುತ್ತಾನೆ.

    ಕಾಲೇಜಿನ ವಿದ್ಯಾರ್ಥಿಗಳ ಚುನಾವಣೆ ಸಮಯ ಗುಂಪು-ಗುಂಪುಗಳಾಗಿ ವಿದ್ಯಾರ್ಥಿಗಳು ವೈಷಮ್ಯ ಬೆಳೆಸಿಕೊಂಡಿದ್ದರು. ಒಂದು ಗುಂಪಿನಲ್ಲಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳ ಕೆಲವರ ತೇಜೋವಧೆ ಮಾಡುವ ಉದ್ದೇಶದಿಂದ ಶ್ರೇಯಾನ್ಸ್ ಎಸ್ ಎಂಬಾತನು ತನಗೆ ಬೇರೆಯವರ ಮೂಲಕ ದೊರೆತ ಈ ವಿಡಿಯೋವನ್ನು ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದ ಎಂದು ಪೊಲಿಸರು ಮಾಹಿತಿ ನೀಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply