Connect with us

LATEST NEWS

ಅಲ್ಪಸಂಖ್ಯಾತರ ಕಲ್ಯಾಣ ಭವನ ಕಲ್ಲೆಸೆತ ಪ್ರಕರಣ 6 ಅರೋಪಿಗಳ ಬಂಧನ..

ಮಂಗಳೂರು ಅಗಸ್ಟ್ 19: ಮಂಗಳೂರು ನಗರದ ಪಾಂಡೇಶ್ವರದಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಭವನಕ್ಕೆ ಕಲ್ಲೆಸೆತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿಯನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಧನರಾಜ್ ಶೆಟ್ಟಿ,ಸುಶಾಂತ್, ಕಾರ್ತಿಕ್ ಶೆಟ್ಟಿ, ಸಾಗರ್ ಬಂಗೇರ, ಮನೀಶ್ ಪುತ್ರನ್ ಎಂದು ಗುರುತಿಸಲಾಗಿದ್ದು,ಓರ್ವ ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿದೆ.

ಬಂಧಿತರನ್ನು ನ್ಯಾಯಾಧೀಶರ ಸಮ್ಮುಖ ಹಾಜರು ಪಡಿಸಲಾಗಿದ್ದು ಅಪ್ರಾಪ್ತ ಬಾಲಕನಿಗೆ ಜಾಮೀನು ಮಂಜೂರು ಮಾಡಲಾಗಿದ್ದು ಉಳಿದ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಆಗಸ್ಟ್ .13ರಂದು ತಡರಾತ್ರಿ ಪಾಂಡೇಶ್ವರದಲ್ಲಿನ ಮೌಲಾನ ಆಝಾದ್ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಭವನಕ್ಕೆ ದುಷ್ಕರ್ಮಿಗಳು ಕಲ್ಲು ಎಸೆದು.ಕಿಟಕಿಯ ಗಾಜುಗಳನ್ನು ಪುಡಿಗೈದಿದ್ದರು. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಟ್ಟಡದಲ್ಲಿನ ಸಿಸಿಟಿವಿ ಕ್ಯಾಮೆರಾಗಳ ಫೂಟೇಜ್‌ಗಳನ್ನು ಪೊಲೀಸರು ಕೂಲಂಕಶವಾಗಿ ಪರಿಶೀಲನೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments

comments