ಉಳ್ಳಾಲದ ಹುಕ್ಕಾ ಬಾರಿಗೆ ಬೀಗ ಜಡಿದ ಪೊಲೀಸರು

ಮಂಗಳೂರು, ಫೆಬ್ರವರಿ 10 : ಮಂಗಳೂರಿನ ಹೊರ ವಲಯದ ಉಳ್ಳಾಲದಲ್ಲಿ ಅನಾಧಿಕೃತವಾಗಿ ಕಾರ್ಯನಿರ್ವಹಿಸಿ ಸಾರ್ವಜನಿಕರ ನೆಮ್ಮದಿ ಹಾಳು ಮಾಡುತ್ತಿದ್ದ ಹುಕ್ಕಾ ಬಾರಿಗೆ ಕೊನೆಗೂ ಪೊಲೀಸರು ದಾಳಿ ನಡೆಸಿ ಬೀಗ ಜಡಿದಿದ್ದಾರೆ.

“ಸ್ಮೋಕಿಂಗ್‌ ಹಟ್‌” ಹೆಸರಿನ ಹುಕ್ಕಾ ಬಾರ್‌ ಉಳ್ಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯ ಮುನ್ನೂರು ಗ್ರಾಮದ ದ್ವಾರಕಾ ಮಯೀ ಕಂಪೌಂಡ್‌ ಒಳಗೆ ಯಾವುದೇ ಪರವಾನಗಿ ಪಡೆಯದೇ ಅನಧಿಕೃತವಾಗಿ ಕಾರ್ಯಾಚರಿಸುತ್ತಿತ್ತು.

ಈ ಹುಕ್ಕಾ ಬಾರನ್ನು ಜೋಜೋ ಜೋಸೆಫ್ ಮತ್ತು ಸಲೀಂ ಎಂಬುವವರು ಅನಧಿಕೃತವಾಗಿ ನಡೆಸುತ್ತಿದ್ದು, ದಾಳಿ ಸಂದರ್ಭ ಜ್ಯಾರಿಯಲ್ಲಿರುವ “Specified Pictorial Health Warning” ಇಲ್ಲದೇ ಸಾರ್ವಜನಿಕರಿಗೆ ಹುಕ್ಕಾ ಫ್ಲೇವೆರ್‌ಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿರುತ್ತದೆ.

ಈ ಸಂಬಂಧ ಕಲಂ 7, 20(2) cigarettes and other Tobacco Products (COTPA)-2003 ರಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸುಮಾರು 57 ಪ್ಯಾಕ್‌ ಸ್ಮೋಕ್ಕಿಂಗ್‌ ಹುಕ್ಕಾ ಫ್ಲೇವರ್‌ಗಳು, ಎಂಟು ಹುಕ್ಕಾ ಪಾಟ್ ಗಳು, ಹದಿನೈದು ಹುಕ್ಕಾ ಪೈಪ್‌ಗಳನ್ನು ದಾಳಿ ಸಂದರ್ಭ ವಶಕ್ಕೆ ಪಡೆಯಲಾಗಿದೆ.

2 ದಿನಗಳ ಹಿಂದೆ ಇಲ್ಲಿ ವಿಭಿನ್ನ ಕೋಮಿನ ಇಂಜಿನೀಯರಿಂಗ್ ಕಾಲೇಜಿನ ಜೋಡಿಗಳು ಹುಕ್ಕಾ ಸೇವಿಸಲು ಬಂದು ಸಂಘಟನೆಯ ಕಾರ್ಯಕರ್ತರ ಕಣ್ಣು ಕೆಂಪಾಗಿರಿಸಿತ್ತು.

 

ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.

Facebook Comments

comments