ದೂರದರ್ಶನ ಸಂದರ್ಶನದಲ್ಲಿ ಮಂಗಳೂರಿನಲ್ಲಿ ಸೇರಿದ ಜನಸ್ತೋಮದ ಬಗ್ಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ

ಮಂಗಳೂರು ಎಪ್ರಿಲ್ 16: ಮಂಗಳೂರು ಪ್ರಧಾನಿ ನರೇಂದ್ರ ಮೋದಿ ರಾಲಿಗೆ ಸೇರಿದ ಜನ ನೋಡಿ ಸ್ವತಹ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಶ್ಚರ್ಯ ತಂದಿದೆ.

ಕಳೆದ ಶನಿವಾರ ಮಂಗಳೂರಿನಲ್ಲಿ ಬಿಜೆಪಿ ಆಯೋಜಿಸಿದ್ದ ಸಂಕಲ್ಪ ರಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ಜನ ಸಾಗರೋಪಾದಿಯಾಗಿ ಆಗಮಿಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರನ್ನು ನೋಡಲು ಜನ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೆಹರೂ ಮೈದಾನದವರೆಗೂ ಸಾಲಾಗಿ ನಿಂತಿದ್ದು. ಮಾನವ ಗೋಡೆಯನ್ನೇ ನಿರ್ಮಿಸಿದ್ದರು.

ಮಂಗಳೂರು ಕಾರ್ಯಕ್ರಮದ ನಂತರ ಡಿಡಿ ನ್ಯೂಸ್‍ಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ, ನಾನು ಹಲವು ರ‍್ಯಾಲಿಯಲ್ಲಿ ಈಗ ಭಾಗವಹಿಸುತ್ತಿದ್ದೇನೆ. ಈ ವೇಳೆ ಭಾರೀ ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ.

2014ರಲ್ಲಿ ನಾನು ಮಂಗಳೂರಿಗೆ ಹೋದಾಗ ಇಷ್ಟು ಜನ ಸೇರಿರಲಿಲ್ಲ. ಈ ಬಾರಿ ನೆರೆದ ಜನ ನೋಡಿ ನಾನು ಆಶ್ಚರ್ಯಗೊಂಡೆ ಎಂದು ತಿಳಿಸಿದರು.

ಮಂಗಳೂರಿನಲ್ಲಿ ನನ್ನ ರೋಡ್ ಶೋ ನಿಗದಿಯಾಗಿರಲಿಲ್ಲ. ನಾನು ಕಾರಿನಲ್ಲಿದ್ದಾಗ ರಸ್ತೆ ಬದಿಯಲ್ಲಿ ಭಾರೀ ಸಂಖ್ಯೆಯಲ್ಲಿದ್ದ ಜನರನ್ನು ನೋಡಿದೆ. ಹೀಗಾಗಿ ಅವರಿಗೆ ವಂದನೆ ಸಲ್ಲಿಸಲು ನಾನು ಕಾರಿನಿಂದ ತಲೆ ಹೊರಗಡೆ ಹಾಕಿ ಕೈ ಬೀಸಿದೆ. ಈ ದೃಶ್ಯವನ್ನು ಮೇಲಿನಿಂದ ಯಾರೋ ವಿಡಿಯೋ ಮಾಡಿದ್ದು, ಆ ವಿಡಿಯೋ ಸಮುದ್ರದ ಅಲೆಯಂತೆ ಕಂಡಿದೆ ಎಂದು ಹೇಳಿದರು.

ನೆಹರೂ ಮೈದಾನದಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟ ಸಂದರ್ಭ ರಸ್ತೆಯ ಎರಡೂ ಬದಿಗಳಲ್ಲಿ ಜನರು ನಿಂತಿರುವುದನ್ನು ನೋಡಿ, ಪ್ರಧಾನಿ ಮೋದಿ ಅವರು ತಮ್ಮ ಭದ್ರತೆಯನ್ನು ಲೆಕ್ಕಿಸದೆ ಕಾರಿನಿಂದ ಹೊರಗೆ ನಿಂತು ಜನರಿಗೆ ಕೈ ಬೀಸಿದ್ದರು. ಈ ದೃಶ್ಯವನ್ನು ಯಾರೋ ವಿಡಿಯೋ ಚಿತ್ರಿಕರಿಸಿದ್ದರು, ನಂತರ ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ವತಹ ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದರು.

VIDEO