Connect with us

    LATEST NEWS

    ಮ್ಯಾನ್‌ ವರ್ಸಸ್‌ ವೈಲ್ಡ್‌ ಟಿವಿ ಶೋ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ರೈಲರ್ ಗೆ ಫಿದಾ ಆದ ಜನತೆ

    ಮ್ಯಾನ್‌ ವರ್ಸಸ್‌ ವೈಲ್ಡ್‌ ಟಿವಿ ಶೋ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ರೈಲರ್ ಗೆ ಫಿದಾ ಆದ ಜನತೆ

    ನವದೆಹಲಿ ಜುಲೈ 29: ಯಾರೂ ಊಹಿಸಲು ಅಸಾಧ್ಯವಾದದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದಾರೆ. ಜಾಗತಿಕವಾಗಿ ಪ್ರಸಿದ್ದವಾಗಿರುವ ಟಿವಿ ಶೋ ಒಂದರಲ್ಲಿ ಭಾಗವಹಿಸಿ ಎಲ್ಲರನ್ನು ಬೆರಗುಗೊಳಿಸಿದ್ದಾರೆ. ಈ ಕಾರ್ಯಕ್ರಮ ಅಗಸ್ಟ್ 12 ರಂದು ನಿಮ್ಮ ಮನೆಯ ಟಿವಿಯಲ್ಲಿ ಕಾಣಿಸಿಕೊಳ್ಳಲಿದ್ದು ಅದರ ಟೀಸರ್ ಈಗ ಬಿಡುಗಡೆಯಾಗಿ ಸುದ್ದಿಮಾಡುತ್ತಿದೆ.

    ಜಾಗತಿಕಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆದಿರುವ ಮ್ಯಾನ್‌ ವರ್ಸಸ್‌ ವೈಲ್ಡ್‌ ಕಾರ್ಯಕ್ರಮದಲ್ಲಿ ಈವರೆಗೂ ಕಂಡಿರದ ಮೋದಿ ಕಾಣಸಿಗಲಿದ್ದಾರೆ. ಡಿಸ್ಕವರಿ ಚಾನೆಲ್ ನ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದಾರೆ.

    ಇಂದು ಅದರ ಟ್ರೈಲರ್ ಬಿಡುಗಡೆಯಾಗಿದೆ.ಪ್ರಾಣಿ ಸಂಕುಲ ಸಂರಕ್ಷಣೆ ಮತ್ತು ಪರಿಸರ ಬದಲಾವಣೆಯ ಕುರಿತು ಅರಿವು ಮೂಡಿಸುವ ಪ್ರಯತ್ನ ನಡೆದಿರುವುದಾಗಿ ಕಾರ್ಯಕ್ರಮದ ನಿರೂಪಕ ಬೇರ್‌ ಗ್ರಿಲ್ಸ್‌ ಬರೆದುಕೊಂಡಿದ್ದಾರೆ. ಮನುಷ್ಯನ ನಿಯಂತ್ರಣದಲ್ಲಿರದ ಕಾಡಿನಲ್ಲಿ ಒಂಟಿಯಾಗಿ ಸಂಚರಿಸುತ್ತ ಎದುರಾಗುವ ಸಂಕಷ್ಟಗಳನ್ನು ದಾಟಿ, ಬದುಕುವ ಕಲೆಯನ್ನು ಕಂಡುಕೊಳ್ಳುವ ಪ್ರಯತ್ನ(ಮ್ಯಾನ್‌ ವರ್ಸಸ್‌ ವೈಲ್ಡ್‌)ದ ಮೂಲಕ ಗ್ರಿಲ್ಸ್‌ ಖ್ಯಾತರಾಗಿದ್ದಾರೆ.

    ಇಂದು ಬಿಡುಗಡೆಯಾಗಿರುವ ಪ್ರೋಮೊದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಿನ್ನ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ತೆಪ್ಪದಲ್ಲಿ ಮಾತನಾಡುತ್ತ ಸಾಗುವುದು, ಕೋಲಿನಿಂದ ಮಾಡಿಕೊಂಡ ಆಯುಧ ಹಿಡಿದು ನಡೆಯುವುದು, ಚಳಿಯಲ್ಲಿ ನದಿ ದಡದಲ್ಲಿ ಕುಳಿತು ಮಾತು–ಕತೆ,…ಇಂಥ ಹಲವು ದೃಶ್ಯಗಳಿಂದ ಕಾರ್ಯಕ್ರಮ ಕುತೂಹಲ ಮೂಡಿಸಿದೆ.

    ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬಿಡುವಿಲ್ಲದ ಸಮಯದಲ್ಲೂ ಸಾಹಸಮಯ ಕಾರ್ಯಕ್ರಮವಾಗಿರುವ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಎಲ್ಲರ ಹುಬ್ಬೆರಿಸುವಂತೆ ಮಾಡಿದೆ.

    ಕಾರ್ಯಕ್ರಮದಲ್ಲಿ ಬಾಗವಹಿಸಿರುವ ಬಗ್ಗೆ ಬರೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ‘ಹಸಿರು ಕಾಡುಗಳು, ವೈವಿಧ್ಯ ಜೀವ ಸಂಕುಲ, ಸುಂದರ ಪರ್ವತಗಳು ಹಾಗೂ ಮೈತುಂಬಿ ಹರಿಯುವ ನದಿಗಳನ್ನು ನೀವು ಭಾರತದಲ್ಲಿ ಕಾಣಬಹುದು. ಈ ಕಾರ್ಯಕ್ರಮವನ್ನು ವೀಕ್ಷಿಸಿದ ಬಳಿಕ ನಿಮಗೆ, ಭಾರತದ ವಿವಿಧ ಭಾಗಗಳಿಗೆ ಭೇಟಿ ನೀಡುವ ಮನಸ್ಸಾಗಲಿದೆ; ಹಾಗೇ ಪರಿಸರ ಸಂರಕ್ಷಣೆಯ ಕಡೆಗೂ ಗಮನ ಹರಿಯಲಿದೆ ಎಂದು ತಿಳಿಸಿದ್ದಾರೆ.

    ಈಗಾಗಲೇ ಸಾಮಾಜಿ ಜಾಲತಾಣಗಳಲ್ಲಿ ಮೋದಿ ಅವರು ಭಾಗವಹಿಸಿರುವ ಎಪಿಸೋಡ್ ಟೀಸರ್ ಬಿಡುಗಡೆಯಾಗಿದ್ದು ಟ್ರೆಂಡಿಗ್ ನಲ್ಲಿದೆ. ಆಗಸ್ಟ್‌ 12ರ ರಾತ್ರಿ ಒಂಬತ್ತಕ್ಕೆ ಡಿಸ್ಕವರಿ ಚಾನೆಲ್‌ನಲ್ಲಿ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ. ಯಾರಿಗೂ ತಿಳಿಯದ ಮೋದಿ ಅವರ ಮತ್ತೊಂದು ಆಯಾಮ ಇಲ್ಲಿ ತೆರೆದುಕೊಳ್ಳಲಿದ್ದು, 180 ರಾಷ್ಟ್ರಗಳಲ್ಲಿ ಪ್ರಸಾರಗೊಳ್ಳಲಿದೆ ಎಂದು ಚಾನೆಲ್‌ ತನ್ನ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿಕೊಂಡಿದೆ.

    VIDEO

    Share Information
    Advertisement
    Click to comment

    You must be logged in to post a comment Login

    Leave a Reply