Connect with us

LATEST NEWS

ಕೊರೊನಾ ವೈರಸ್ ಅಲರ್ಟ್, ಇಂದು ಮತ್ತೆ ದೇಶವನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ

ಕೊರೊನಾ ವೈರಸ್ ಅಲರ್ಟ್, ಇಂದು ಮತ್ತೆ ದೇಶವನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ

ನವದೆಹಲಿ ಮಾರ್ಚ್ 24: ಕರೋನಾ ಮಾಹಾಮಾರಿ ದೇಶದಾದ್ಯಂತ ಹೆಚ್ಚಾಗುತ್ತಿರುವ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ ಮತ್ತೆ ಇಂದು ರಾತ್ರಿ 8 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಕರೋನಾ ಹಿನ್ನಲೆ ಕಳೆದ ಶುಕ್ರವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 22 ರಂದು ಒಂದು ದಿನದ ಸ್ವಯಂ ಪ್ರೇರಿತ ಜನತಾ ಕರ್ಪ್ಯೂವನ್ನು ಆಚರಿಸುವಂತೆ ಜನರಲ್ಲಿ ಮನವಿ ಮಾಡಿದ್ದರು.

ಇಂದು ಮತ್ತೆ 8 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದು, ದೇಶದ ಜನರಿಗೆ ಯಾವ ಸಂದೇಶ ನೀಡಲಿದ್ದಾರೆ ಎನ್ನುವ ಕುತೂಹಲ ಕೆರಳಿದೆ.

Facebook Comments

comments