Connect with us

    DAKSHINA KANNADA

    ಕದ್ರಿ ಮಂಜುನಾಥೇಶ್ವರ ಕ್ಷೇತ್ರದಲ್ಲಿ ಪ್ಲಾಸ್ಟಿಕ್ ಪ್ರಿಯರ ದರ್ಬಾರ್

    ಕದ್ರಿ ಮಂಜುನಾಥೇಶ್ವರ ಕ್ಷೇತ್ರದಲ್ಲಿ ಪ್ಲಾಸ್ಟಿಕ್ ಪ್ರಿಯರ ದರ್ಬಾರ್

    ಮಂಗಳೂರು,ಜನವರಿ 22: ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ರಥೋತ್ಸವ ಪ್ರಯುಕ್ತ ನಡೆದ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಪ್ಲಾಸ್ಟಿಕನ್ನು ಯಥೇಚ್ಛವಾಗಿ ಬಳಸಲಾಗಿದೆ.

    ಮಂಗಳೂರು ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಬೇಕೆನ್ನುವ ಪ್ರಯತ್ನಗಳ ನಡುವೇ ಈ ಹೊಸ ವ್ಯವಸ್ಥೆಗೆ ದೇವಸ್ಥಾನದ ಆಡಳಿತ ಮಂಡಳಿ ಹೆಜ್ಜೆ ಇಟ್ಟಂತಿದೆ.

    ಇಲ್ಲಿ ಸಾರ್ವಜನಿಕ ಅನ್ನಸಂತರ್ಪಣೆಗೂ ನೀರು ಕೊಡಲು ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಲಾಗಿತ್ತು.

    ಮದುವೆ ಕಾರ್ಯಕ್ಕೆ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಕೊಡುವುದು ಫ್ಯಾಷನ್ ಆಗಿದೆ. ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯುವುದು ಕೆಲವರಿಗೆ ಒಂದು ರೀತಿಯ ಹೆಗ್ಗಳಿಕೆ ಎನ್ನುವ ಮನಸ್ಥಿತಿಯೂ ಇದೆ.

    ಆದರೆ ದೇವಸ್ಥಾನಗಳ ಸಾರ್ವಜನಿಕ ಅನ್ನಸಂತರ್ಪಣೆಗೂ ಇಂಥ ಪ್ಲಾಸ್ಟಿಕ್ ಬಾಟಲಿ ಬಳಕೆ ಬೇಕೇ ಎನ್ನುವ ಪ್ರಶ್ನೆ ಮೂಡಲಾರಂಭಿಸಿದೆ.

    ಅದೂ ಅಲ್ಲದೆ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ಈ ದೇವಸ್ಥಾನದಲ್ಲಿ ಪ್ಲಾಸ್ಟಿಕ್ ಬಳಕೆಗೆ ಸಂಪೂರ್ಣ ನಿಶೇಧ ಹೇರಬೇಕಿತ್ತು.

    ಆದರೆ ಕದ್ರಿಯಲ್ಲಿ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕೊಟ್ಟು ಸರಕಾರದ ಪ್ಲಾಸ್ಟಿಕ್ ನಿಶೇಧವೆನ್ನುವ ಮನವಿಗೆ ಎಳ್ಳುನೀರು ಬಿಡಲಾಗಿದೆ.

    ಇದು ದೇವಸ್ಥಾನದ ಆಡಳಿತ ಮಂಡಳಿ ಕೈಗೊಂಡ ನಿರ್ಧಾರವೋ, ಬಾಟಲಿ ನೀರಿನ ಗುತ್ತಿಗೆ ವಹಿಸಿಕೊಂಡ ಕೆಲವು ಪಟ್ಟಭದ್ರರು ಮಾಡಿಕೊಂಡ ಬಾನಗಡಿಯೋ ಎನ್ನುವ ವಿಚಾರ ಬೆಳಕಿಗೆ ಬರಬೇಕಿದೆ.

    ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಊಟ ಮಾಡಿದ್ದರೆ ಅಷ್ಟೂ ಮಂದಿಗೆ ಬಾಟಲಿಯಲ್ಲಿ ನೀರು ಕೊಟ್ಟು ಪ್ಲಾಸ್ಟಿಕ್ ದುರ್ಬಳಕೆ ಮಾಡಿದಂತಾಗಿದೆ.

    ಪ್ಲಾಸ್ಟಿಕ್ ಬಾಟಲಿ  ನೀರು ಅನಿವಾರ್ಯ ಸಂದರ್ಭಕ್ಕೆ ಬಳಸಲ್ಪಡಬೇಕೇ ವಿನಾ ಬಾಟಲಿ ನೀರೇ ನಮ್ಮ ಅನಿವಾರ್ಯತೆ ಆಗಬಾರದು ಎನ್ನುವ ಆಕ್ರೋಶವೂ ಕೇಳಿ ಬರಲಾರಂಭಿಸದೆ.

    Share Information
    Advertisement
    Click to comment

    You must be logged in to post a comment Login

    Leave a Reply