Connect with us

DAKSHINA KANNADA

ಪಿಲಿಕುಳ: ಹೊಸ ಅಪರೂಪದ ಪ್ರಾಣಿ ಪಕ್ಷಿಗಳ ಸೇರ್ಪಡೆ

ಮಂಗಳೂರು, ನವೆಂಬರ್ 09: ದೇಶದಲ್ಲೇ ಬೃಹತ್ ಮೃಗಾಲಯ ಗಳಲ್ಲಿ ಒಂದಾದ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಅಳಿವಿನಂಚಿನಲ್ಲಿ ಇರುವ ಒಂದು ಜೊತೆ ತೋಳಗಳು ಸೇರ್ಪಡೆಯಾಗಿವೆ. ಪ್ರಾಣಿ ವಿನಿಮಯ ಯೋಜನೆಯಲ್ಲಿ ಆಂಧ್ರದ ವಿಶಾಖಪಟ್ಟಣದ ಮೃಗಾಲಯದಿಂದ ತರಿಸಲಾಗಿದೆ.

ಹೊಸ ಜಗತ್ತಿನ ಮಂಗಗಳೆಂದು ಕರೆಯಲ್ಪಡುವ (New World Monkeys ) 4 ಜೊತೆ ಅಳಿಲು ಮಂಗ . ಮಾರ್ಮಸೆಟ್, ಟಾಮರಿಂನ್ ಗಳು ಆಗಮಿಸಿವೆ. ಇವು ಮಧ್ಯ ಮತ್ತು ದಕ್ಷಿಣ ಅಮೇರಿಕಾದಲ್ಲಿ ಕಂಡು ಬರುವ ಚಿಕ್ಕ ಜಾತಿಯ ಮಂಗಗಳಾಗಿವೆ ಮೆಕ್ಸಿಕೋ ದೇಶದಲ್ಲಿ ಕಂಡು ಬರುವ ಬ್ಲೂ ಗೋಲ್ಡ್ ಮಕಾವ್. ಆಸ್ಟ್ರೇಲಿಯಾದಲ್ಲಿ ಕಂಡು ಬರುವ ಗಾಲಾ (Galah ), ದಕ್ಷಿಣ ಆಫ್ರಿಕಾ ಖಂಡದಲ್ಲಿ ಕಾಣ ಸಿಗುವ ಟುರಾಕೋ ಗಳನ್ನು ತರಿಸಲಾಗಿದೆ.

ಹೊಸದಾಗಿ ಆಗಮಿಸಿರುವ ಪ್ರಾಣಿ ಪಕ್ಷಿಗಳ ಆವರಣಗಳನ್ನು ಸಮುಚ್ಚಯವನ್ನು ನಿರ್ಮಿಸಲು ಒಂದು ಕೋಟಿ ರೂಪಾಯಿ ದೇಣಿಗೆಯನ್ನು ರಿಲಾಯನ್ಸ್ ಫೌಂಡೇಶನ್ ದೇಣಿಗೆ ನೀಡಿವೆ. ಹೊಸದಾಗಿ ಸೇರ್ಪಡೆಯದ ಪ್ರಾಣಿ ಪಕ್ಷಿಗಳಿಗೆ ಅವುಗಳ ನೈಸರ್ಗಿಕ ಆವಾಸ ಸ್ಥಾನವನ್ನು ಹೋಲುವ ಆವರಣಗಳನ್ನು ರಚಿಸಲಾಗಿದೆ.

ಆವರಣದ ಒಳಗೆ ಪ್ರಾಣಿಗಳಿಗಾಗಿ, ಆಹಾರ ನೀಡವ ಕೇಂದ್ರ. ಬೀಡಿಂಗ್ ಬೋಕ್ಸ್ ಇತ್ಯಾದಿ ಸಲಕರಣೆಗಳನ್ನು ಉಚಿತವಾಗಿ ಲೈವ್ ಸೈನ್ಸ್ Education Trust ಬೆಂಗಳೂರು ಇವರು ಓದಗಿಸಿರುತ್ತಾರೆ. ಈಗಾಗಲೆ ಪಿಲಿಕುಳ ಮೃಗಾಲಯದಲ್ಲಿ 1200 ರಷ್ಟು ವಿವಿಧ ಜಾತಿಯ ಪ್ರಾಣಿ ಪಕ್ಷಿ ಉರಗ ಗಳಿದ್ದು. ಇನ್ನಷ್ಟು ಪ್ರಾಣಿಗಳನ್ನು ತರಿಸಿ ಆಕರ್ಷಣೆಯನ್ನು ಹೆಚ್ಚಿಸುವ ಪ್ರಕ್ರಿಯೆ ನಡೆಯುತ್ತಿವೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕರಾದ  ಹೆಚ್. ಜೆ.ಭಂಡಾರಿ ತಿಳಿಸಿದ್ದಾರೆ.

Share Information
Advertisement
Click to comment

You must be logged in to post a comment Login

Leave a Reply