Connect with us

    LATEST NEWS

    ತಾಜ್‌ಮಹಲ್‌ನ ಮುಚ್ಚಿರುವ ಕೋಣೆಗಳ ಪೋಟೋ ಬಿಡುಗಡೆ

    ನವದೆಹಲಿ, ಮೇ 17: ವಿಶ್ವವಿಖ್ಯಾತ ಆಗ್ರಾದ ತಾಜ್‌ಮಹಲ್‌ನಲ್ಲಿ ಮುಚ್ಚಿರುವ 22 ಕೋಣೆಗಳನ್ನು ತೆರೆಯಬೇಕೆನ್ನುವ ಅರ್ಜಿಯೊಂದು ಅಲಹಾಬಾದ್‌ ನ್ಯಾಯಾಲಯದ ಮೆಟ್ಟಿಲೇರಿ ಸುದ್ದಿ ಮಾಡಿದ ಬೆನ್ನಲ್ಲೇ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್‌ಐ) ಆ ಕೋಣೆಗಳ ಫೋಟೋಗಳನ್ನು ಬಿಡುಗಡೆ ಮಾಡಿದೆ.

    ಮುಚ್ಚಿದ್ದ ಕೋಣೆಗಳಲ್ಲಿ ಈ ಹಿಂದೆ ಮಾಡಲಾದ ಕಾಮಗಾರಿಯ ಫೋಟೋಗಳನ್ನು ಜನವರಿ 2022 ರಲ್ಲಿ ಫೋಟೋಗಳು ಪ್ರಸಾರ ಮಾಡಲಾಗಿದ್ದು ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿವೆ ಎಂದು ಆಗ್ರಾ ಎಎಸ್‌ಐ ಮುಖ್ಯಸ್ಥ ಆರ್‌ಕೆ ಪಟೇಲ್ ತಿಳಿಸಿದ್ದಾರೆ. ಈ ಪೋಟೋಗಳಲ್ಲಿ ಅದರಲ್ಲಿ ಅಲ್ಲಿನ ಗೋಡೆಗಳು ಕಾಮಗಾರಿಗೂ ಮೊದಲು ಮತ್ತು ನಂತರ ಹೇಗೆ ಕಾಣಿಸುತ್ತಿದ್ದವು ಎನ್ನುವುದನ್ನು ವಿವರಿಸುವ ನಾಲ್ಕು ಫೋಟೋಗಳಿವೆ.

    ಪ್ಲಾಸ್ಟರಿಂಗ್‌ ಮತ್ತು ಪೇಂಟಿಂಗ್‌ ಕೆಲಸ ಮಾಡಿರುವುದನ್ನು ಫೋಟೋಗಳಲ್ಲಿ ಗಮನಿಸಬಹುದು. ಈ ಕೊಠಡಿಗಳಲ್ಲಿ ಯಾವುದೇ ರಹಸ್ಯಗಳಿಲ್ಲ ಎಂದು ಈ ಹಿಂದೆಯೇ ಎಎಸ್‌ಐ ಅಧಿಕಾರಿಗಳು ಕೋರ್ಟ್‌ಗೆ ಮಾಹಿತಿ ನೀಡಿದ್ದರು. ಸ್ಮಾರಕಗಳನ್ನು ಸಂರಕ್ಷಿಸುವುದು ಎಎಸ್‌ಐ ಯ ಪ್ರಮುಖ ಕರ್ತವ್ಯವಾಗಿದೆ.

    ಅಯೋಧ್ಯೆಯ ಬಿಜೆಪಿ ನಾಯಕ ಡಾ.ರಜನೀಶ್ ಸಿಂಗ್ ಅವರು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠದಲ್ಲಿ ತಾಜ್ ಮಹಲ್‌ನಲ್ಲಿರುವ ಒಟ್ಟು 22 ಮುಚ್ಚಿದ ಕೊಠಡಿಗಳನ್ನು ಬಾಗಿಲುಗಳನ್ನು ತೆರೆಯುವಂತೆ ಒತ್ತಾಯಿಸಿ ರಿಟ್ ಅರ್ಜಿ ಸಲ್ಲಿಸಿದ್ದು ಕೋರ್ಟ್ ಈಮನವಿಯನ್ನು ತಳ್ಳಿಹಾಕಿದೆ.

    Share Information
    Advertisement
    Click to comment

    You must be logged in to post a comment Login

    Leave a Reply