LATEST NEWS
ಈ ಬಾರಿ ಪೆಟ್ರೋಲ್ ಡಿಸೆಲ್ ಜೊತೆ ಎಲ್ ಪಿಜಿ ಬೆಲೆನೂ ಏರಿಕೆ
ನವದೆಹಲಿ ಫೆಬ್ರವರಿ 5: ಕೊರೊನಾ ಸಂಕಷ್ಟದ ನಡುವೆಯೂ ಕೇಂದ್ರ ಸರಕಾರ ಮತ್ತೆ ಪೆಟ್ರೋಲ್ ಮತ್ತು ಡಿಸೆಲ್ ಮೇಲೆ ಸೆಸ್ ಹಾಕಿದ್ದು, ಗ್ರಾಹಕರಿಗೆ ಯಾವುದೇ ರೀತಿಯ ಬೆಲೆ ಏರಿಕೆಯಾಗುವುದಿಲ್ಲ ಎಂದು ಹಣಕಾಸು ಸಚಿವೆ ಹೇಳಿದ್ದರೂ ನಿನ್ನೆಯಿಂದ ಪೆಟ್ರೋಲ್ ಮತ್ತು ಡಿಸೆಲ್ ಬೆಲೆ ಏರಿಕೆಯಾಗಿದೆ. ಇದರ ಜೊತೆ ಎಲ್ ಪಿಜಿ ಬೆಲೆ ಕೂಡ ಹೆಚ್ಚಳವಾಗಿದೆ.
ಸರ್ಕಾರಿ ತೈಲ ಸಂಸ್ಥೆಗಳು ಸತತವಾಗಿ ತೈಲ ದರ ಏರಿಕೆ ಮಾಡುತ್ತಿದ್ದು, ಶುಕ್ರವಾರ ಕೂಡ ಪೆಟ್ರೋಲ್, ಡೀಸೆಲ್ ದರ ಮತ್ತೊಂದು ಗರಿಷ್ಠ ಮಟ್ಟವನ್ನು ತಲುಪಿಬಿಟ್ಟಿದೆ. ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 30 ಪೈಸೆ ಏರಿಕೆಗೊಂಡು 86.95 ರೂಪಾಯಿ ತಲುಪಿದ್ದರೆ, ಡೀಸೆಲ್ ದರ ಲೀಟರ್‌ಗೆ 30 ಪೈಸೆ ಏರಿಕೆಯಾಗಿ 77.13 ರೂಪಾಯಿಗೆ ತಲುಪಿದೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ಬೆಂಗಳೂರು- ಪೆಟ್ರೋಲ್ 89.85 ರೂ., ಡೀಸೆಲ್ 81.76 ರೂ.
ಮುಂಬೈ- ಪೆಟ್ರೋಲ್ 93.49 ರೂ., ಡೀಸೆಲ್ 83.99 ರೂ.
ಚೆನ್ನೈ- ಪೆಟ್ರೋಲ್ 89.39 ರೂ., ಡೀಸೆಲ್ 82.33 ರೂ.
ಕೋಲ್ಕತ್ತಾ- ಪೆಟ್ರೋಲ್ 88.30 ರೂ., ಡೀಸೆಲ್ 80.71 ರೂ.
ದೆಹಲಿ- ಪೆಟ್ರೋಲ್ 86.95 ರೂ., ಡೀಸೆಲ್ 77.13 ರೂ.
ಇನ್ನು ಸರಕಾರಿ ತೈಲ ಮಾರಾಟ ಸಂಸ್ಥೆ ಗಳು ದೇಶಾದ್ಯಂತ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 25 ರೂ. ಏರಿಸಿದ್ದು, ನಿನ್ನೆಯಿಂದಲೇ ಪರಿಷ್ಕೃತ ದರ ಜಾರಿಗೊಂಡಿದೆ.ದಿಲ್ಲಿಯಲ್ಲಿ ಸಿಲಿಂಡರ್‌ಗೆ 694 ರೂ. ಬದಲಾಗಿ 719 ರೂ. ನಿಗದಿಯಾಗಿದೆ. ಬೆಂಗಳೂರಿನಲ್ಲಿ 697 ರೂ. ಇದ್ದ ಗ್ಯಾಸ್ ಸಿಲಿಂಡರ್ ಬೆಲೆ 722 ರೂ. ತಲುಪಿದೆ. ಮುಂಬಯಿಯಲ್ಲಿ 719 ರೂ., ಚೆನ್ನೈಯಲ್ಲಿ 735 ರೂ.ವರೆಗೆ ಏರಿಕೆಯಾಗಿದೆ.