LATEST NEWS
ಮುಂದುವರೆದೆ ಪೆಟ್ರೋಲ್ ಮತ್ತು ಡಿಸೆಲ್ ಬೆಲೆ ಏರಿಕೆ…ರಾಜ್ಯದಲ್ಲಿ 90 ಸನಿಹಕ್ಕೆ ಪೆಟ್ರೋಲ್ ಬೆಲೆ
ನವದೆಹಲಿ ಜನವರಿ 27: ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯಲ್ಲಿದ್ದು, ಕರ್ನಾಟಕದಲ್ಲಿ ಪೆಟ್ರೋಲ್ ಬೆಲೆ 90ರ ಸನಿಹಕ್ಕೆ ಬಂದು ನಿಂತಿದೆ.
ಇಂದು ಮತ್ತೆ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ. ಕಳೆದ ವಾರದಿಂದ ನಿರಂತರವಾಗಿ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಾಗುತ್ತಿದೆ. ಇಂದು ಪ್ರತಿ ಲೀಟರ್ ಪೆಟ್ರೋಲ್ಗೆ 27 ಪೈಸೆ ಏರಿಕೆ ಮಾಡಲಾಗಿದೆ. ಪ್ರತಿ ಲೀಟರ್ ಡೀಸೆಲ್ ಮೇಲೆ 25 ಪೈಸೆ ಹೆಚ್ಚಳ ಮಾಡಲಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಹೆಚ್ಚಳವಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುವುದು, ಹಾಗೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆಯಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಇಳಿಸುವುದು ಸಾಮಾನ್ಯವಾದ ಸಂಗತಿ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಸತ್ಸಂಪ್ರದಾಯವನ್ನು ಮರೆತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಗಣನೀಯವಾಗಿ ಕಡಿಮೆ ಆಗುತ್ತಿದ್ದರೂ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿರಂತರವಾಗಿ ಹೆಚ್ಚಳ ಮಾಡುತ್ತಲೇ ಇದೆ.
ದೇಶದ ವಿವಿಧ ನಗರಗಳಲ್ಲಿನ ಪೆಟ್ರೋಲ್ -ಡೀಸೆಲ್ ಬೆಲೆ
ಬೆಂಗಳೂರು- ಪೆಟ್ರೋಲ್ 89.21 ರೂ., ಡೀಸೆಲ್ 81.10 ರೂ.
ಮುಂಬೈ- ಪೆಟ್ರೋಲ್ 92.86 ರೂ., ಡೀಸೆಲ್ 83.30 ರೂ.
ಚೆನ್ನೈ- ಪೆಟ್ರೋಲ್ 88.82 ರೂ., ಡೀಸೆಲ್ 81.71 ರೂ.
ಪಾಟ್ನಾ- ಪೆಟ್ರೋಲ್ 88.76 ರೂ., ಡೀಸೆಲ್ 81.63 ರೂ.
ಭೂಪಾಲ್- ಪೆಟ್ರೋಲ್ 88.08 ರೂ., ಡೀಸೆಲ್ 81.08 ರೂ.
ಕೋಲ್ಕತ್ತಾ- ಪೆಟ್ರೋಲ್ 87.69 ರೂ., ಡೀಸೆಲ್ 80.08 ರೂ.
ದೆಹಲಿ- ಪೆಟ್ರೋಲ್ 86.30 ರೂ., ಡೀಸೆಲ್ 76.48 ರೂ.
ನೋಯ್ಡಾ- ಪೆಟ್ರೋಲ್ 85.67 ರೂ., ಡೀಸೆಲ್ 76.93 ರೂ.
ಲಕ್ನೋ- ಪೆಟ್ರೋಲ್ 85.40 ರೂ., ಡೀಸೆಲ್ 76.60 ರೂ.
ರಾಂಚಿ- ಪೆಟ್ರೋಲ್ 84.80 ರೂ., ಡೀಸೆಲ್ 80.91 ರೂ.
ಗುರುಗಾವ್ – ಪೆಟ್ರೋಲ್ 84.43 ರೂ., ಡೀಸೆಲ್ 77.08 ರೂ.
Facebook Comments
You may like
ಇಂಧನ ಬೆಲೆ ಇಳಿಸುವವರೆಗೆ ಹಾಲಿನ ದರ ಲೀಟರ್ಗೆ 100 ರೂ! ಎನಿದು ಹೊಸ ಪ್ರತಿಭಟನೆ?
ತೈಲ ದರ ಹೆಚ್ಚಾದರೂ ಚಿಂತೆಯಿಲ್ಲ ಎನ್ನುವವರಿಗೆ ಲೀಟರಿಗೆ 1 ಸಾವಿರ ದರ ವಿಧಿಸಿ : ಯು.ಟಿ. ಖಾದರ್
ಮತ್ತೆ ಪೆಟ್ರೋಲ್ ಮತ್ತು ಡಿಸೆಲ್ ಬೆಲೆ ಏರಿಕೆ.. ಫೆಬ್ರವರಿಯಲ್ಲಿ ಇದು 16ನೇ ಬಾರಿ
ಬೆಸಿಗೆಯಲ್ಲಿ ಇಳಿಕೆಯಾಗಲಿದೆಯಂತೆ ಪೆಟ್ರೋಲ್ ಬೆಲೆ – ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್
ಪೆಟ್ರೋಲ್ ಬೆಲೆ ಏರಿಕೆ ವಿರುದ್ದ ಉಡುಪಿಯಲ್ಲಿ ವಿಭಿನ್ನ ರೀತಿಯ ಪ್ರತಿಭಟನೆ
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಬೈಸಿಕಲ್ ಏರಿದ ರಾಬರ್ಟ್ ವಾದ್ರಾ
You must be logged in to post a comment Login