Connect with us

    LATEST NEWS

    ಕಳೆದ 15 ದಿನದಲ್ಲಿ 12 ಬಾರಿ ಪೆಟ್ರೋಲ್ – ಡೀಸೆಲ್ ಬೆಲೆ ಏರಿಕೆ

    ನವದೆಹಲಿ ಡಿಸೆಂಬರ್ 5: ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರುತ್ತಲೇ ಇದ್ದು, ಕಳೆದ 15 ದಿನಗಳಲ್ಲಿ 12 ಬಾರಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಿದ್ದು, ಇಂದು ಮತ್ತೆ ಬೆಲೆ ಏರಿಕೆಯಾಗಿದೆ. ಇದರೊಂದಿಗೆ ದೆಹಲಿಯಲ್ಲಿ ಡೀಸೆಲ್ ಬೆಲೆ 73.32ಕ್ಕೆ ಏರಿಕೆಯಾಗಿದ್ದು ಪೆಟ್ರೋಲ್ ಬೆಲೆ 83.13 ರೂಪಾಯಿ ಆಗಿದೆ. ಇಂದು ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್ ಗೆ 25 ಪೈಸೆ ಹಾಗೂ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 27 ಪೈಸೆ ಹೆಚ್ಚಿಸಲಾಗಿದೆ.


    ಸುಮಾರು ಎರಡು ತಿಂಗಳವರೆಗೆ ಸ್ಥಿರವಾಗಿದ್ದ ಎರಡೂ ಇಂಧನಗಳ ಬೆಲೆ ನವೆಂಬರ್ 20 ಮೊದಲ ಬಾರಿಗೆ ಹೆಚ್ಚಳವಾಯಿತು. ನವೆಂಬರ್ 20 ರಿಂದು 12 ಬಾರಿ ತೈಲ ಬೆಲೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಡೀಸೆಲ್ ಬೆಲೆ 77.73 ಆಗಿದ್ದು, ಪೆಟ್ರೋಲ್ ಬೆಲೆ 85.91 ಆಗಿದೆ.


    ಇನ್ನು ದೇಶದಲ್ಲಿ ಮಧ್ಯಪ್ರದೇಶದಲ್ಲಿ ಈಗಾಗಲೇ ಪೆಟ್ರೋಲ್ ಬೆಲೆ 90ರ ಗಡಿ ದಾಟಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಹಾಗೂ ಭಾರತದ ಡಾಲರ್ ಹಾಗೂ ರೂಪಾಯಿ ನಡುವಿನ ಅಂತರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಗಳು ಏರಿಕೆಯಾಗಲು ಕಾರಣ ಎಂದು ಹೇಳಲಾಗಿದೆ.  ಸದ್ಯದಲ್ಲೇ ಕೊರೊನಾ ಲಸಿಕೆ ಬರುವ ಸಾಧ್ಯತೆ ಇದ್ದು, ನಂತರ ಬಹುತೇಕ ಸಾರಿಗ ವ್ಯವಸ್ಥೆ ಕೊವಿಡ್ ಸೊಂಕಿ ಗಿಂತ ಮೊದಲಿನ ಸ್ಥಿತಿಗೆ ಮರಳಲಿದ್ದು.. ಬಳಕೆ ಜಾಸ್ತಿಯಾಗುವ ಹಿನ್ನಲೆ ಪೆಟ್ರೋಲ್ ಬೆಲೆ 100 ಗಡಿ ದಾಟುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply