Connect with us

MANGALORE

ಕೇರಳ ದಕ್ಷಿಣಕನ್ನಡ ರಸ್ತೆ ಬಂದ್ ಹಿನ್ನಲೆ ಒಳ ರಸ್ತೆಯಲ್ಲಿ ಆಗಮಿಸುತ್ತಿರುವ ಜನ

ಕೇರಳ ದಕ್ಷಿಣಕನ್ನಡ ರಸ್ತೆ ಬಂದ್ ಹಿನ್ನಲೆ ಒಳ ರಸ್ತೆಯಲ್ಲಿ ಆಗಮಿಸುತ್ತಿರುವ ಜನ

ಮಂಗಳೂರು ಮಾರ್ಚ್ 22: ಕೇರಳದಲ್ಲಿ ಕರೋನಾ ಪ್ರಕರಣಗಳ ಹೆಚ್ಚಳ ಹಿನ್ನಲೆ ದಕ್ಷಿಣಕನ್ನಡ ಜಿಲ್ಲಾಡಳಿತ ಕರ್ನಾಟಕ-ಕೇರಳ ರಸ್ತೆ ಸಂಪರ್ಕ ಬಂದ್ ಮಾಡಿದ್ದರೂ ಕೇರಳದಿಂದ ಕರ್ನಾಟಕಕ್ಕೆ ಒಳ ರಸ್ತೆಯಲ್ಲಿ ಸಾರ್ವಜನಿಕರು ಆಗಮಿಸುತ್ತಿದ್ದಾರೆ.

ಕೇರಳ ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಗಡಿಯ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಆದರೂ ಕೇಳದ ಜನ ಒಳ ರಸ್ತೆಗಳಲ್ಲಿ ಕರ್ನಾಟಕ್ಕೆ ಆಗಮಿಸುತ್ತಿದ್ದಾರೆ. ಈ ನಡುವೆ ವಾಹನಗಳನ್ನು ತಡೆಯುತ್ತಿದ್ದ ಪೊಲೀಸರ ಕರ್ತವ್ಯಕ್ಕೂ ಅಡ್ಡಿಪಡಿಸಿರುವ ಘಟನೆ ನಡೆದಿದ್ದು, ಈ ಸಂಬಂಧ ಸಾರಡ್ಕ ಚೆಕ್ ಪೋಸ್ಟ್ ನಲ್ಲಿ ಓರ್ವನನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಕಲ್ಲಡ್ಕ – ಕಾಂಞಂಗಾಡು ರಸ್ತೆಯ ಸಾರಡ್ಕ ಎಂಬಲ್ಲಿ ಪೆರ್ಲ ಸಮೀಪದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನಲೆರಾಘವೇಂದ್ರ ರಾವ್ ಬಂಧಿಸಲಾಗಿದೆ.

Facebook Comments

comments