DAKSHINA KANNADA
ಭಾನುವಾರದ ಭೀಕರ ಸುಂಟರ ಗಾಳಿಗೆ ಕೊಕ್ಕಡ ಜನ ತತ್ತರ, ಹಾರಿ ಹೋಯ್ತು ಮನೆಗಳ ಹಂಚು, ಶೀಟ್‌ಗಳು..!
ಪುತ್ತೂರು : ಕೊಕ್ಕಡ ಪರಿಸರದ ಉಪ್ಪಾರಹಳ್ಳದಲ್ಲಿ ಭಾನುವಾರ ದಿಢೀರನೇ ಎದ್ದ ಸುಳಿಗಾಳಿಗೆ ಜನ ತ್ತರಿಸಿದ್ದು ಗಾಳಿಯ ರಭಸಕ್ಕೆ ಹಲವಾರು ಅಡಿಕೆ ಮರಗಳು ನೆಲಕ್ಕುರುಳಿದರೆ, ಹಲವು ಮನೆಗಳ ಶೀಟು ಹಂಚುಗಳು ಹಾರಿ ಹೋಗಿವೆ.
ಗೋಳಿತೊಟ್ಟು ಬಳಿಯ ಕೋಡಿಂಗೇರಿ ಪ್ರದೇಶದ ಉಪ್ಪಾರಹಳ್ಳದಲ್ಲಿ ಎದ್ದ ಸುಳಿಗಾಳಿಗೆ ಕೃಷಿಕರೊಬ್ಬರ 100 ಕ್ಕೂ ಅಧಿಕ ಅಡಿಕೆ ಮರಗಳು ಉರುಳಿ ಬಿದ್ದರೆ, ಕೊಕ್ಕಡ ಪ್ರದೇಶದ ಅನೇಕ ಕೃಷಿಕರ ಅಡಿಕೆ ತೋಟಗಳಿಗೆ ಹಾನಿಯಾಗಿದೆ.
ಕೋಡಿಂಗೇರಿ ರತ್ನಾವತಿ ಕೃಷ್ಣಪ್ಪ ಗೌಡ ಅವರ ಮನೆಯ ಹಂಚು ಹಾಗೂ ಶೀಟ್ ಸಂಪೂರ್ಣ ಹಾರಿಹೋಗಿ ಹಾನಿಯಾಗಿದೆ. ಪಿಜಿನಡ್ಕ ಕಾಲೋನಿಯ ಒಂದಿಬ್ಬರ ಮನೆಯ ಶೀಟುಗಳು ಹಾರಿ ಹೋಗಿದೆ. ಘಟನಾ ಸ್ಥಳಕ್ಕೆ ಕಂದಾಯ, ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿರುವುದಾಗಿ ತಿಳಿದು ಬಂದಿದೆ.
You must be logged in to post a comment Login