Connect with us

UDUPI

ಕೋಟ-ಮನೆ ಬಾಗಿಲಿಗೆ ತೆರಳಿ ಪಿಂಚಣಿ ವಿತರಣೆ

ಕೋಟ-ಮನೆ ಬಾಗಿಲಿಗೆ ತೆರಳಿ ಪಿಂಚಣಿ ವಿತರಣೆ

ಉಡುಪಿ, ಫೆಬ್ರವರಿ 20 : ಜಿಲ್ಲೆಯಲ್ಲಿ ಸಾರ್ವಜನಿಕರ ಮನೆ ಬಾಗಿಲಿಗೆ ತೆರಳಿ ಪಿಂಚಣಿ ವಿತರಿಸುವ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ಸಹಾಯಕ ಕಮೀಷನರ್ ನಿರ್ದೇಶನದಂತೆ ಹಾಗೂ ಬ್ರಹ್ಮಾವರ ತಹಶೀಲ್ದಾರರಾದ ಕಿರಣ್ ಜಿ ಗೌರಯ್ಯ ರವರ ಮಾರ್ಗದರ್ಶನದಂತೆ ಮನೆ ಮನೆಗೆ ತೆರಳಿ ಪಿಂಚಣಿಗೆ ಸಂಬಂಧಿಸಿದ ಅರ್ಜಿಗಳನ್ನು ಪಡೆದು ಸ್ಥಳದಲ್ಲಿಯೇ ಗ್ರಾಮ ಲೆಕ್ಕಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರು ತನಿಖಾ ವರದಿಯನ್ನು ಬರೆದು ಕೋಟ ನಾಡ ಕಛೇರಿ ಉಪತಹಶೀಲ್ದಾರರು ಸ್ಥಳದಲ್ಲಿಯೇ ಮಂಜೂರಾತಿ ಮಾಡಿದರು.

ಮಂಜೂರಾತಿ ಆದೇಶದ ಪ್ರತಿಗಳನ್ನು ಅಂಚೆ ಮೂಲಕ ಸಂಬಂಧಪಟ್ಟ ಫಲಾನುಭವಿಗಳಿಗೆ ತಲುಪಿಸಲಾಗುವುದು. ಒಟ್ಟು 5 ಸಂಧ್ಯಾ ಸುರಕ್ಷಾ ಯೋಜನೆ, 2 ವೃದ್ದಾಪ್ಯ ಯೋಜನೆ ಹಾಗೂ 1 ವಿಧಾನ ವೇತನ ಫಲಾನುಭವಿಗಳಿಗೆ ಮಂಜೂರಾತಿ ಮಾಡಲಾಯಿತು.

Facebook Comments

comments