ಉರಿ ಸಿನೆಮಾ ವೀಕ್ಷಿಸಿದ ಪೇಜಾವರ ಶ್ರೀಗಳು

ಉಡುಪಿ ಮಾರ್ಚ್ 1 : ದೇಶಭಕ್ತಿ ಮತ್ತು ದೇಶದ ಯೋಧರ ಅಭೂತಪೂರ್ವ ಸಾಹಸಗಾಥೆಯನ್ನೊಳಗೊಂಡ ಉರಿ ಹಿಂದಿ ಚಲನಚಿತ್ರವನ್ನು ಪೇಜಾವರ ಶ್ರೀಗಳು ವಿಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದನಾ ಶಿಬಿರಗಳ ಮೇಲೆ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಘಟನಾವಳಿ ಆಧರಿತ ಸಿನೆಮಾ ಇದಾಗಿದ್ದು, ಉರಿ ಸಿನಿಮಾ ಬಿಡುಗಡೆಯಾದ ನಂತರ ದೇಶಾದ್ಯಂತ ಸಂಚಲನ ಮೂಡಿಸಿದ್ದು, ಪ್ರಧಾನಿ, ಉಪರಾಷ್ಟ್ರಪತಿ, ರಕ್ಷಣಾ ಸಚಿವೆ ಆದಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಈ ಚಲನಚಿತ್ರ ಸನ್ಯಾಸಿಗಳನ್ನೂ ತನ್ನೆಡೆಗೆ ಸೆಳೆದಿದೆ.

ಮಠದ ಭಕ್ತರೊಬ್ಬರು ಮಣಿಪಾಲದ ಭಾರತ್ ಸಿನೆಮಾ ಚಿತ್ರಮಂದಿರದಲ್ಲಿ ಏರ್ಪಡಿಸಿದ್ದ ವಿಶೇಷ ಪ್ರದರ್ಶನವನ್ನು ಪೇಜಾವರ ಶ್ರೀಗಳು, ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ತಮ್ಮ ಶಿಷ್ಯರೊಂದಿಗೆ ಉರಿ ಸಿನಿಮಾ ವೀಕ್ಷಿಸಿಸಿದರು.

ನಂತರ ಮಾತನಾಡಿದ ಸೋದೆ ಶ್ರೀಗಳು, ಸನ್ಯಾಸಿ ಮತ್ತು ಸೈನಿಕ ಸಮಾಜಕ್ಕಾಗಿಯೇ ಬದುಕುತ್ತಾರೆ. ಹೀಗಾಗಿ ಸೈನಿಕರ ಶೌರ್ಯ ಮತ್ತು ಪರಾಕ್ರಮವನ್ನು ಅರಿತುಕೊಳ್ಳಲು ಸಿನಿಮಾ ಒಂದು ಮಾಧ್ಯಮವಾಗಿದೆ. ದೇಶಭಕ್ತಿ ಮತ್ತು ಯೋಧರ ಮೇಲಿನ ಅಭಿಮಾನದಿಂದ ಸಿನಿಮಾ ವೀಕ್ಷಿಸಲು ಬಂದಿದ್ದೇವೆ ಎಂದು ತಿಳಿಸಿದರು.

8 Shares

Facebook Comments

comments