ಕುಕ್ಕೆ ಸುಬ್ರಹ್ಮಣ್ಯ ವಿವಾದ ಪರಿಹಾರಕ್ಕೆ ಮಧ್ಯಸ್ಥಿಕೆ ವಹಿಸಲಿರುವ ಪೇಜಾವರ ಶ್ರೀ

ಉಡುಪಿ ಜೂನ್ 6: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಮಠದ ನಡುವೆ ನಡೆಯುತ್ತಿರುವ ಸಂಘರ್ಷಕ್ಕೆ ಪರಿಹಾರ ಕಂಡು ಕೊಳ್ಳಲು ಪೇಜಾವರ ಶ್ರೀಗಳು ಮಧ್ಯಸ್ಥಿಕೆ ವಹಿಸಲಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು ಮಠ ಹಾಗೂ ದೇವಸ್ಥಾನಗಳಲ್ಲಿ ಸಂಘರ್ಷ ಇರಬಹುದು, ಈ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು. ಶುಕ್ರವಾರ ಮಧ್ಯಾಹ್ನ ನಂತರ ಸುಬ್ರಹ್ಮಣ್ಯಕ್ಕೆ ಬೇಟಿ ನೀಡಲಿದ್ದು, ಅಲ್ಲಿ ಎಲ್ಲರ ಜೊತೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು. ಅದಷ್ಟು ಸಮನ್ವಯ ಸಾಧಿಸಲು ತಿಳಿಸುತ್ತೇನೆ. ಸುಬ್ರಹ್ಮಣ್ಯ ಮಠ ಹಾಗೂ ದೇವಸ್ಥಾನದ ನಡುವೆ ಸೌಹಾರ್ದ ಸಾಮರಸ್ಯ ಬೆಳೆಯಲು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಸಂಪುಟ ನರಸಿಂಹ ಮಠದ ನಡುವೆ ಹಲವು ವರ್ಷಗಳಿಂದ ಸಂಘರ್ಷ ನಡೆಯುತ್ತಿದ್ದು, ಇತ್ತೀಚೆಗೆ ಈ ಸಂಘರ್ಷ ಹೊಡೆದಾಟದ ಮಟ್ಟಕ್ಕೆ ತಲುಪಿದೆ. ಈಗಾಗಲೇ ಹಿಂದೂ ಸಂಘಟನೆಗಳು ದೇವಸ್ಥಾನ ಹಾಗೂ ಮಠದ ನಡುವೆ ಇರುವ ಸಂಘರ್ಷಕ್ಕೆ ತಮ್ಮ ಅಸಮಧಾನ ಹೊರ ಹಾಕಿವೆ.

10 Shares

Facebook Comments

comments