ಭಾರತ ರಾಷ್ಟ್ರದ ಪ್ರಜೆ ನಾನು. ಹೆಮ್ಮೆಯಿಂದ ಮತ ಚಲಾಯಿಸಿದ್ದೇನೆ- ಪೇಜಾವರ ಶ್ರೀ

ಉಡುಪಿ ಎಪ್ರಿಲ್ 18: ಭಾರತ ರಾಷ್ಟ್ರದ ಪ್ರಜೆ ನಾನು. ಹೆಮ್ಮೆಯಿಂದ ಮತ ಚಲಾಯಿಸಿದ್ದೇನೆ ಅಲ್ಲದೆ ಈಗಾಗಲೇ ಎಲ್ಲರೂ ಮತದಾನ ಮಾಡುವಂತೆ ಕರೆ ಕೊಟ್ಟಿದ್ದೇನೆ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.

ಉಡುಪಿಯಲ್ಲಿ ಮತದಾನ ಮಾಡಿದ ನಂತರ ಮಾತನಾಡಿದ ಅವರ ಮತದಾನ ಮಾಡದೇ ಹೋದರೆ ನಾವು ಕರ್ತವ್ಯ ಭ್ರಷ್ಟರು ಆಗುತ್ತೇವೆ. ಅಲ್ಲದೆ ಮುಂದಿನ ದಿನಗಳಲ್ಲಿ ಸರ್ಕಾರವನ್ನು ಟೀಕಿಸುವ ಹಕ್ಕು ಕಳೆದುಕೊಳ್ಳುತ್ತೇವೆ ಎಂದು ಹೇಳಿದರು.

ಚುನಾವಣೆ ಸಂದರ್ಭದಲ್ಲಿ ವೈಯಕ್ತಿಕ ನಿಂದನೆಗಳು ಜಾಸ್ತಿಯಾಗಿದ್ದು, ಚುನಾವಣಾ ಪ್ರಚಾರ ಅತ್ಯಂತ ಕೆಳಮಟ್ಟಕ್ಕೆ ಬಂದಿದೆ. ಇನ್ನಾದರೂ ವೈಯಕ್ತಿಕ ನಿಂದನೆ ಮಾಡುವುದು ಬಿಡಿ. ವೈಯಕ್ತಿಕ ನಿಂದನೆಯೆಲ್ಲ ನಿಷ್ಪ್ರಯೋಜಕ ಎಂದು ಕಿವಿಮಾತು ಹೇಳಿದರು.

ಬಲಿಷ್ಠವಾದ, ಅಭಿವೃದ್ಧಿ ಶೀಲ ಭಾರತ ಆಗಬೇಕು. ಕೃಷಿ, ಉದ್ಯಮ, ನಿರುದ್ಯೋಗ ಸಮಸ್ಯೆ ಪರಿಹಾರ ಆಗಬೇಕು. ಅದಕ್ಕಾಗಿ ನೀವು ತಪ್ಪದೇ ನಿಮ್ಮ ಹಕ್ಕನ್ನು ಚಲಾಯಿಸಿ ಎಂದು ತಿಳಿಸಿದರು.

VIDEO

16 Shares

Facebook Comments

comments