ಮಂಗಳೂರಿನ ಅನಂತಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದ ಅಚ್ಚರಿ

ಮಂಗಳೂರು ಮೇ 14: ಮಂಗಳೂರು ಹೊರವಲಯದ ನೀರುಮಾರ್ಗದಲ್ಲಿರುವ ಅನಂತ ಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅಚ್ಚರಿಯೊಂದು ನಡೆದಿದೆ.

ಸುಬ್ರಹ್ಮಣ್ಯ ದೇಗುಲದಲ್ಲಿ ನಿನ್ನೆ ದೇವರಿಗೆ ಅರ್ಪಿಸಿದ ಧ್ವಜಸ್ತಂಭಕ್ಕೆ ತೈಲಧಿವಾಸ ಪೂಜೆ ಅದ್ದೂರಿಯಾಗಿ ನಡೆದಿತ್ತು. ಇದೇ ವೇಳೆ ಸುಬ್ರಹ್ಮಣ್ಯನ ವಾಹನ ನವಿಲು ಪ್ರತ್ಯಕ್ಷವಾಗಿ, ಭಕ್ತರ ಜೊತೆ ಪೂಜೆಯಲ್ಲಿ ಭಾಗಿಯಾಗಿ ಅಚ್ಚರಿ ಮೂಡಿಸಿದೆ.

ದೇವರ ಪೂಜೆ ಸಂದರ್ಭದಲ್ಲಿ ನವಿಲು ದೇಗುಲದ ಒಳಭಾಗದ ಅಂಗಣದಲ್ಲಿ ಪ್ರದಕ್ಷಿಣೆ ಹಾಕಿದ್ದಲ್ಲದೆ, ಜನರ ಜೊತೆಯೆ ನವಿಲು ಕೂಡ ನಡೆದುಬಂದಿದ್ದು ಅಚ್ಚರಿಗೆ ಕಾರಣವಾಗಿತ್ತು. ಅಲ್ಲದೆ, ಸುಬ್ರಹ್ಮಣ್ಯನಿಗೆ ಗರ್ಭಗುಡಿಯಲ್ಲಿ ಪೂಜೆ ನಡೆಯುತ್ತಿದ್ದಾಗ ಮುಂಭಾಗದಲ್ಲಿ ನವಿಲು ನಿಂತಿರುವುದು ಕಂಡು ಭಕ್ತರು ಸ್ವತಃ ದೇವರೇ ಬಂದಿರುವ ರೀತಿ ಕೈಮುಗಿದು ಭಕ್ತಿ ತೋರಿದರು.

ಏನಿದ್ದರೂ, ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಸುಬ್ರಹ್ಮಣ್ಯನ ವಾಹನವೇ ಬಂದು ನಿಂತಿದ್ದು ಭಕ್ತರಿಗೆ ಪಾಲಿಗೆ ವಿಶೇಷವೇ ಸರಿ.

VIDEO