Connect with us

    BELTHANGADI

    ಕರಾವಳಿಗೂ ಕಾಲಿಟ್ಟ ಪೇ ಸಿಎಂ ಸ್ಟಿಕ್ಕರ್ ಅಭಿಯಾನ….!!

    ಬೆಳ್ತಂಗಡಿ ಸೆಪ್ಟೆಂಬರ್ 24: ರಾಜ್ಯ ಸರಕಾರಕ್ಕೆ ಮುಜುಗರವುಂಟು ಮಾಡಿದ ಪೇ ಸಿಎಂ ಪೋಸ್ಟರ್ ಇದೀಗ ಕರಾವಳಿಗೂ ಕಾಲಿಟ್ಟಿದ್ದರೂ, ಬೆಳ್ತಂಗಡಿ ಪೇಟೆಯಲ್ಲಿ ಹಲವು ಕಡೆಗಳಲ್ಲಿ ಈ ಪೋಸ್ಟರ್ ಕಾಣಿಸಿಕೊಂಡಿದೆ.


    ರಾಜ್ಯ ಸರಕಾರದ ನಲ್ವತ್ತು ಪರ್ಸೆಂಟ್ ಕಮಿಷನ್ ಆರೋಪದ ವಿರುದ್ಧ ಕಾಂಗ್ರೆಸ್ ಕೈಗೊಂಡಿರುವ ಪೇ ಸಿಂ ಅಭಿಯಾನದ ಹಿನ್ನಲೆ ಬೆಳ್ತಂಗಡಿ ಬಸ್ ನಿಲ್ದಾಣ, ಆಸುಪಾಸಿನ ಸಾರ್ವಜನಿಕ ಪ್ರದೇಶದಲ್ಲಿ ಮುಖ್ಯಮಂತ್ರಿ ಚಿತ್ರವುಳ್ಳ ಪೇ ಸಿಂ ಸ್ಟಿಕ್ಕರ್ ಕಾಣಿಸಿಕೊಂಡಿದೆ. ರಾತ್ರಿ ವೇಳೆ ಸಾರ್ವಜನಿಕ ಪ್ರದೇಶದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸ್ಟಿಕ್ಕರ್ ಅಂಟಿಸಿದ್ದಾರೆ. ಸಾರಿಗೆ ಬಸ್, ಬಸ್ ಸ್ಟ್ಯಾಂಡ್, ಅಂಗಡಿಗಳ ಗೋಡೆಗಳ ಮೇಲೆ ಸ್ಟಿಕ್ಕರ್ ಅಂಟಿಸಲಾಗಿದೆ. ಪೇ ಸಿಂ ಸ್ಟಿಕ್ಕರ್ ಜೊತೆ ಪೇ ಎಂ ಎಲ್ ಎ ಸ್ಟಿಕ್ಕರ್ ಕೂಡ ಜೊತೆಗಿದ್ದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರನ್ನು ಅಣಕಿಸಲಾಗಿದೆ.


    ಇದೇ ವೇಳೆ, ಸೋಷಿಯಲ್ ಮೀಡಿಯಾದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೆಸರಲ್ಲೂ ಪೇ ಸ್ಟಿಕ್ಕರ್ ಹರಿದಾಡುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply