ಮಂಗಳೂರು ಸೆಪ್ಟೆಂಬರ್ 12: ತೆಲುಗು ನಟ ಪವನ್ ಕಲ್ಯಾಣ ಧರ್ಮಸ್ಥಳಕ್ಕೆ ಬರುತ್ತಾರೆ ಎಂಬ ವಿಚಾರ ಕೇಳಿ ತುಂಬಾ ಸಂತೋಷವಾಗಿತ್ತು, ಅವರ ಜೊತೆ ಮಾತನಾಡಬೇಕೆಂಬ ಆಸೆ ಇತ್ತು ಎಂದು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.


ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪವನ್ ಕಲ್ಯಾಣ್ ಬರುತ್ತಾರೆ ಎಂಬ ವಿಚಾರ ಸಂತೋಷವಾಗಿತ್ತು, ಅವರ ಬಳಿ ಮಾತನಾಡಬೇಕೆಂಬ ಆಸೆ ಇತ್ತು. ಮೊದಲ ಬಾರಿಗೆ ಅವರು 21 ಸೀಟುಗಳನ್ನು ಪ್ರಥಮ ಬಾರಿ ಗೆದ್ದು ಅಪರೂಪದ ರಾಜಕೀಯ ಸಾಧನೆ ಮಾಡಿದ್ದಾರೆ ಎಂದರು. ಪವನ್ ಕಲ್ಯಾಣ ಸನಾತನ ಧರ್ಮ ರಕ್ಷಣೆಗೆ ದುಡಿಯುತ್ತಿದ್ದಾರೆ. ಅನೇಕ ವಿಷಯಗಳನ್ನು ತಿಳಿದುಕೊಂಡಿದ್ದಾರೆ. ಮೊದಲನೇ ಚುನಾವಣೆಯಲ್ಲಿ ಗೆದ್ದು ಉಪ ಮುಖ್ಯಮಂತ್ರಿಯಾಗಿದ್ದಾರೆ. ಅವರನ್ನು ನೋಡುವ ಆಸೆ ಸಹಜವಾಗಿ ಇತ್ತು. ಅವರು ಬರುವ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ, ಆದರೆ ಕಾರಣಾಂತರಗಳಿಂದ ಅವರು ಬಂದಿಲ್ಲ. ಮುಂದೆ ಅವರ ಕ್ಷೇತ್ರಕ್ಕೆ ಬಂದು ಹೋಗಲಿ, ಧರ್ಮಸ್ಥಳಕ್ಕೆ ಬರ್ತೇನೆ ಅಂದಮೇಲೆ ಅವರು ಬರಲೇಬೇಕು, ಮಾತು ಬಿಡ ಮಂಜುನಾಥ ಎಂಬ ಮಾತಿದೆ ಎಂದರು.


ಪವನ್ ಕಲ್ಯಾಣ ಅವರು ಸಾಮಾನ್ಯ ಮನುಷ್ಯರಲ್ಲ ಕಾಲ ಪುರುಷ, ಆಂಧ್ರಪ್ರದೇಶದಲ್ಲಿ ಎನ್ಟಿಆರ್ ಕೂಡ ಪ್ರಸಿದ್ಧರಾಗಿದ್ದರು ಅದೇ ರೀತಿ ಇವರು ಕೂಡ ಪ್ರಸಿದ್ಧರಾಗುತ್ತಾರೆ. ಅಂತಹ ಭಾಗ್ಯ ಪವನ್ ಕಲ್ಯಾಣ್ ಅವರಿಗೆ ದೊರಕಲಿ ಎಂದು ಆಶೀರ್ವದಿಸಿದರು. ದೀಪ ಕತ್ತಲೆಯನ್ನು ಹೋಗಲಾಡಿಸುತ್ತದೆ, ಆಗ ಬೆಳಕು ತನ್ನಷ್ಟಕ್ಕೆ ಬರುತ್ತದೆ. ನಮ್ಮ ಮೇಲೆ ಬಂದಿರುವಂತ ಅಪವಾದಗಳು ಓಡಿ ಹೋಗುತ್ತವೆ. ಈ ದೀಪಾರಾಧನೆಯಿಂದ ಕ್ಷೇತ್ರದ ಅಪಾಯ ದೂರವಾಗುತ್ತದೆ, ನಾನು ಮಾತನಾಡಬಾರದು ಎಂದು ಕಾನೂನು ಇದೆ. ಹಾಗಾಗಿ ನಾನು ಹೆಚ್ಚು ಮಾತನಾಡುವುದಿಲ್ಲ ಎಂದರು.

Share Information