ಬೆಳ್ತಂಗಡಿ ಸೆಪ್ಟೆಂಬರ್ 20: ಧರ್ಮಸ್ಥಳ ಪ್ರಕರಣ ಯಾಕೋ ಮುಗಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಈಗಾಗಲೇ ಎಸ್ಐಟಿ ಪ್ರಕರಣದ ತನಿಖೆ ನಡೆಸುತ್ತಿರುವುದರ ನಡುವೆ ದೂರುದಾರ ಚಿನ್ನಯ್ಯ ಎರಡು ವರ್ಷಗಳ ಹಿಂದೆ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಜೊತೆ ಮಾತುಕತೆ ನಡೆಸಿದ ಮತ್ತೊಂದು ವಿಡಿಯೋ ಇದೀಗ ಬಿಡುಗಡೆಯಾಗಿದೆ. ಧರ್ಮಸ್ಥಳ ಪ್ರಕರಣ ಪ್ರಮುಖ ದೂರುದಾರ ಚಿನ್ನಯ್ಯ ಮಹೇಶ್ ಶೆಟ್ಟಿ ತಿಮರೋಡಿ ಅವರ ಜೊತೆ ನಡೆಸಿದ ಮಾತುಕತೆಯ ಎರಡನೇ ವಿಡಿಯೋ ಇಂದು ಬಿಡುಗಡೆಯಾಗಿದೆ.


2 ವರ್ಷಗಳ ಹಿಂದೆ 2023ರ ಆಗಸ್ಟ್‌ನಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಚಿನ್ನಯ್ಯ ಭೇಟಿಯಾಗಿದ್ದ ವಿಡಿಯೋ ಇದ್ದಾಗಿದ್ದು, ಶುಕ್ರವಾರ ರಿಲೀಸ್ ಮಾಡಿದ್ದ ವಿಡಿಯೋದ ಮುಂದುವರಿದ ಭಾಗವಿದು. ವಿಡಿಯೋದಲ್ಲಿ ಆರೋಪಿ ಚಿನ್ನಯ್ಯ ಸ್ಟಾಟ್ ನಂ.17ರ ಬಗ್ಗೆ ಮಾತನಾಡಿದ್ದಾನೆ. ಗೊಮ್ಮಟ ಬೆಟ್ಟದಿಂದ ಬರುವ ಫಸ್ಟ್ ಟರ್ನ್‌ನಲ್ಲಿ ಏನಿಲ್ಲ ಅಂದ್ರೂ 70ಕ್ಕೂ ಹೆಚ್ಚು ಹೆಣ ಹೂತು ಹಾಕಿದ್ದೇನೆ. ಅದು ಸ್ಮಶಾನ ಅಲ್ಲ, ಬಸ್ ಸ್ಟ್ಯಾಂಡ್‌ನಿಂದ ತರಕಾರಿ ತೆಗೆದುಕೊಂಡು ಹೋಗುವ ಗಾಡಿಯಲ್ಲಿ ಹೆಣ ತಂದು ಹೂತು ಹಾಕುತ್ತಿದ್ದೆ. ಯಾವ ನೆಲ ಒಣಗಿರುತ್ತೋ ಅದನ್ನು ತೆಗೆದು ಹೂತು ಹಾಕುತ್ತಿದ್ದೆ. ಇನ್ನೂ ನೇತ್ರಾವತಿ ತೀರದಲ್ಲಿ ಹೆಣ ಹೂತುಹಾಕಿದ್ದಕ್ಕೆ ಲೆಕ್ಕವೇ ಇಲ್ಲ.

 

ಇದನ್ನೂ ಓದಿ: – ಬಂಗ್ಲೆಗುಡ್ಡೆಯಲ್ಲಿ ಸಿಕ್ಕಿದ್ದು ಪುರುಷರ ತಲೆಬುರುಡೆ -ಪ್ರಾಥಮಿಕ ವರದಿಯಲ್ಲಿ ಬಹಿರಂಗ

ಪ್ರಾಥಮಿಕ ಶಾಲೆಯ ಹಿಂಭಾಗದ ಭಟ್ರ ಮನೆಯ ಬಾವಿಯಲ್ಲಿ ಒಂದು ಹೆಣ ಸಿಕ್ಕಿತ್ತು. ಅಲ್ಲಿ ಏನಾಯ್ತು ಅಂತಾ ಗೊತ್ತಿಲ್ಲ. ನೇತ್ರಾವತಿಯಲ್ಲಿ ಒಂದು ಹೆಣ ತೆಗೆದಿದ್ದೆ. ಅದೇ ದಿನ ಪೊಲೀಸರು ನನಗೆ ಭಟ್ರ ಮನೆಗೆ ಕರೆದುಕೊಂಡು ಹೋದರು. ಅಲ್ಲಿ ಕೇಳಿದ್ರೆ ಹುಡುಗಿ ಫೇಲ್ ಆಗಿದ್ದಕ್ಕೆ ಬಾವಿಗೆ ಹಾರಿದ್ದಳು ಎಂದಿದ್ದರು. ನಾನು ಹೆಣ ಮೇಲೆ ಹಾಕಿ ವಾಪಾಸ್ ಬಂದೆ. ಜೊತೆಗೆ ಬಿಳಿ ಸೀರೆಯ ಕೇರಳ ಮೂಲದ ಹೆಂಗಸಿನ ಹೆಣವೊಂದನ್ನು ಹೂತು ಹಾಕಿದ್ದೇನೆ ಎಂದಿದ್ದಾನೆ.

Share Information