Connect with us

DAKSHINA KANNADA

ಕಾಂತಾರ -2 ಗೆ ಸಿನೆಮಾಕ್ಕೆ ಅನುಮತಿ ನೀಡಿದ ಪಂಜುರ್ಲಿ ಗುಳಿಗ ದೈವಗಳು,-ನವೆಂಬರ್ 27 ರಂದು ಸಿನೆಮಾ ಮೂಹೂರ್ತ..!

ಚಿತ್ರತಂಡ ಅನುಮತಿಗಾಗಿ ಪಂಜುರ್ಲಿ ಹಾಗೂ ಗುಳಿಗ ದೈವದ ಮೊರೆ ಹೋಗಿದ್ದು ಸಿನಿಮಾ ಮಾಡಲು ದೈವಗಳು ಒಪ್ಪಿಗೆ ಸೂಚಿಸಿವೆ ಎನ್ನಲಾಗಿದೆ ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ 2024 ಅಂತ್ಯಕ್ಕೆ ಥಿಯೇಟರ್‌ಗಳಲ್ಲಿ ಪಂಜುರ್ಲಿ ದೈವದ ವೈಭವವನ್ನು ಕಣ್ತುಂಬಿಕೊಳ್ಳಲಿದ್ದಾರೆ.
.

ಉಡುಪಿ : ಕನ್ನಡ ಸಿನಿಮಾ ರಂಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿ ದೇಶ ವಿದೇಶಗಳಲ್ಲಿ ಜನಮನ್ನಣೆ ಪಡೆದ ಡಿವೈನ್ ಸ್ಟಾರ್ ರಿಶಬ್ ಶೆಟ್ಟಿ ನಿರ್ದೇಶನದ ‘ಕಾಂತಾರ ಸಿನೆಮಾದ ಬಗ್ಗೆ ನಿಮಗೆಲ್ಲ ಗೊತ್ತೇ ಇದೆ. ಹೊಂಬಾಳೆ ಫಿಲ್ಸ್ 17 ಕೋಟಿಯಲ್ಲಿ ತಯಾರಾದ ‘ಕಾಂತಾರ’ ವಿಶ್ವದಾದ್ಯಂತ ಬರೋಬ್ಬರಿ 400 ಕೋಟಿ ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿದ್ದಿ ಇದೀಗ ಇತಿಹಾಸ. ಇನ್ನು ರಿಶಬ್ ಶೆಟ್ಟಿಯ ನಟನೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದಲ್ಲದೆ, ಸೂಪರ್ ಸ್ಟಾರ್ ತಲೈವಾ ರಜನಿಕಾಂತ್ ಕೂಡ ರಿಶಬ್ ರನ್ನು‌ ಮನೆಗೆ ಕರೆಸಿ ಅಭಿನಂದಿಸಿದ್ದರು.


ಇದೀಗ ಒಂದು ವರ್ಷದ ಬಿಡುವಿನ ಬಳಿಕ ಕಾಂತಾರ-2 ಸಿನಿಮಾ ತೆರೆ ಮೇಲೆ ತರಲು ಸಿನೆಮಾ ತಂಡ ಸಜ್ಜಾಗಿದೆ. ರಿಶಬ್ ಶೆಟ್ಟಿ ಮತ್ತು ತಂಡ ಕಾಂತಾರ-2 ಸಿನಿಮಾದ ಕಥೆ ಬರೆಯಲು ಅಜ್ಞಾತ ಸ್ಥಳಕ್ಕೆ ತೆರಳಿ ಅಲ್ಲೇ ಬೀಡು ಬಿಟ್ಟಿದ್ದಾರೆ. ಮತ್ತೊಂದೆಡೆ ಸಿನಿಮಾದ ಮುಹೂರ್ತಕ್ಕೆ ಸದ್ದಿಲ್ಲದೆ ತಯಾರಿ ಕೂಡ ನಡೆದಿದೆ ಎನ್ನಲಾಗಿದೆ. ಸಕಲ ತಯಾರಿಗಳೊಂದಿಗೆ ಇದೇ ನವೆಂಬರ್ 27 ರಂದು ‘ಕಾಂತಾರ-2’ ಸಿನಿಮಾದ ಮುಹೂರ್ತ ಸರಳವಾಗಿ ನಡೆಯಲಿದೆ ಬಲ್ಲ ಮೂಲಗಳು ತಿಳಿಸಿವೆ. ಮುಹೂರ್ತದ ಬಳಿಕ ಡಿಸೆಂಬರ್ ನಲ್ಲಿ ಸ್ಕ್ರಿಪ್ಟ್ ಕೆಲಸಗಳನ್ನು ಮುಗಿಸಿ 2024ರ ಜನವರಿಯಿಂದಲೇ ಶೂಟಿಂಗ್ ಆರಂಭವಾಗಲಿದೆಯಂತೆ. ರಿಶಬ್ ಶೆಟ್ಟಿ ಈ ಹಿಂದೆ ಕಾಂತಾರ-2 ಸೀಕ್ವೆಲ್ ಅಲ್ಲ ಪ್ರೀಕ್ವೆಲ್ ಎಂದಿದ್ದರು. ಅದೇ ಪ್ರಕಾರ ಇದೀಗ ರಿಶಬ್ ಚಿತ್ರಕ್ಕಾಗಿ ಇತಿಹಾಸದ ಆಳ ಅಧ್ಯಯನದಲ್ಲಿ ತೊಡಗಿದ್ದು, 14ನೇ ಶತಮಾನದ ಕಥೆಯನ್ನು ತೆರೆಯ ಮೇಲೆ ತರಲು ಸಿದ್ಧತೆ ನಡೆಸುತ್ತಿದ್ದಾರೆ.

ಈ ಸಿನಿಮಾದಲ್ಲಿ ಪಂಜುರ್ಲಿ ದೈವದ ಹುಟ್ಟಿನ ಕಥೆಯನ್ನು ರಿಶಬ್ ಹೇಳ ಹೊರಟಿದ್ದು, ಇದಕ್ಕಾಗಿ ಹೊಂಬಾಳೆ ಫಿಲ್ಮ್ಸ್ ಬರೋಬ್ಬರಿ 110 ಕೋಟಿ ಬಜೆಟ್ ಕೂಡಿಕೆ ಮಾಡಲಿದೆಯಂತೆ.ಸಿನಿಮಾ ಅಂದ್ರೆ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವ ರಿಶಬ್ ಶೆಟ್ಟಿ ಎಂದಿಗೂ ರಾಜಿ ಮಾಡಿಕೊಂಡವರಲ್ಲ. ಇದೀಗ ಕಾಂತಾರ-2 ಚಿತ್ರಕ್ಕಾಗಿ ಕುದುರೆ ಸವಾರಿ, ಕಳರಿ ಕಲಿಯುತ್ತಿದ್ದಾರೆ. ಜೊತೆಗೆ ರಿಶಬ್ ಲುಕ್ ಕೂಡ ಚೇಂಜ್ ಆಗಲಿದೆಯಂತೆ. ಈಗಾಗಲೇ ಚಿತ್ರತಂಡ ಅನುಮತಿಗಾಗಿ ಪಂಜುರ್ಲಿ ಹಾಗೂ ಗುಳಿಗ ದೈವದ ಮೊರೆ ಹೋಗಿದ್ದು ಸಿನಿಮಾ ಮಾಡಲು ದೈವಗಳು ಒಪ್ಪಿಗೆ ಸೂಚಿಸಿವೆ ಎನ್ನಲಾಗಿದೆ ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ 2024 ಅಂತ್ಯಕ್ಕೆ ಥಿಯೇಟರ್‌ಗಳಲ್ಲಿ ಪಂಜುರ್ಲಿ ದೈವದ ವೈಭವವನ್ನು ಕಣ್ತುಂಬಿಕೊಳ್ಳಲಿದ್ದಾರೆ.


.

Share Information
Continue Reading
Advertisement
Click to comment

Leave a Reply

Your email address will not be published. Required fields are marked *