LATEST NEWS
ಜನವರಿ 1ರಿಂದ ಪ್ಯಾಕೇಜ್ಡ್ ಮಿನರಲ್ ವಾಟರ್ ಹೊಸ ನಿಯಮ
ನವದೆಹಲಿ, ಡಿಸೆಂಬರ್05:ಬಾಟಲಿಗಳಲ್ಲಿ ಪೂರೈಸುವ ಲವಣಯುಕ್ತ ನೀರಿಗೆ (ಪ್ಯಾಕೇಜ್ ಮಿನರಲ್ ವಾಟರ್) ಸಂಬಂಧಿಸಿದ ಹೊಸ ನಿಯಮ ಜನವರಿ 1ರಿಂದ ಜಾರಿಗೆ ಬರಲಿದೆ. ಪ್ರತಿ ಲೀಟರ್ ನೀರಿನಲ್ಲಿ 20 ಮಿಲಿಗ್ರಾಂ ಕ್ಯಾಲ್ಸಿಯಂ ಮತ್ತು 10 ಮಿಲಿಗ್ರಾಂ ಮ್ಯಾಗ್ನಿಷಿಯಂ ಇರಬೇಕು. ಇವು ಆರೋಗ್ಯಕ್ಕೆ ಅತ್ಯಂತ ಮಹತ್ವದ ಅಂಶಗಳಾಗಿವೆ ಎಂದು ಭಾರತ ಆಹಾರ ಸುರಕ್ಷತೆ ಮತ್ತು ಮಾನಕ ಪ್ರಾಧಿಕಾರ (ಎಫ್ಎಸ್ಎಸ್ಎಐ) ಹೇಳಿದೆ.
ಕಂಪನಿಗಳು ಈ ನಿಯಮ ಪಾಲಿಸುವುದು ಕಡ್ಡಾಯವಾಗಿದೆ. ಭಾರತದ ಮಾರುಕಟ್ಟೆಯಲ್ಲಿ అందాజు 150 ಬ್ರಾಂಡ್ಗಳಿದ್ದು, ಲೈಸೆನ್ಸ್ ಹೊಂದಿದ ವಾಟರ್ ಬಾಟ್ಲಿಂಗ್ ಘಟಕಗಳ ಸಂಖ್ಯೆ 6000 ఇದೆ.
ಖನಿಜಗಳು ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುವುದರಿಂದ ಪ್ಯಾಕೇಜ್ ಕುಡಿಯುವ ನೀರಿನಲ್ಲಿ ಕೆಲವು ನಿರ್ದಿಷ್ಟ ಖನಿಜಗಳನ್ನು ಸೇರಿಸುವ ಸಾಧ್ಯತೆಯನ್ನು ಪರಿಶೀಲಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್ಜಿಟಿ) ಎಫ್ಎಸ್ಎಸ್ಎಐಗೆ ಸೂಚಿಸಿತ್ತು. ಮಾನವ ಬಳಕೆಗೆ ಸುರಕ್ಷಿತಗೊಳಿಸುವ ಉದ್ದೇಶದಿಂದ ನೀರನ್ನು ಸೋಸುವ (ಫಿಲ್ಟರ್) ವೇಳೆ ಅದರಲ್ಲಿನ ಖನಿಜಗಳು ನಷ್ಟವಾಗುತ್ತವೆ. ಹೀಗಾಗಿ ಅವುಗಳನ್ನು ಸೇರಿಸುವುದು ಸೂಕ್ತ ಎಂಬುದು ಎನ್ಜಿಟಿ ಅಭಿಪ್ರಾಯವಾಗಿದೆ,
ಎರಡು ಬಾರಿ ಗಡುವು ವಿಸ್ತರಣೆಗೊಂಡಿದ್ದುಎನ್ಜಿಟಿಯ ಮೂಲ ಆದೇಶ ಹೊರಬಿದ್ದಿದ್ದು 2019ರ ಮೇ 29ರಂದು. ಗಡುವನ್ನು ಎರಡು ಬಾರಿ ವಿಸ್ತರಿಸಲಾಗಿದ್ದು ಪ್ಯಾಕೇಜ್ ಮಿನರಲ್ ವಾಟರ್ ಕಂಪನಿಗಳು 2020ರ ಡಿಸೆಂಬರ್ 31ರೊಳಗೆ ನಿಯಮವನ್ನು ಕಡ್ಡಾಯವಾಗಿ ಜಾರಿ ಮಾಡುವಂತೆ ಸೂಚಿಸಲಾಗಿದೆ.
Facebook Comments
You may like
-
20 ರೂ ನೀರಿನ ಬಾಟಲ್ ಗಾಗಿ ಬರೋಬ್ಬರಿ 5 ವರ್ಷದ ಹೋರಾಟ, ಸಿಕ್ಕಿದ ಪರಿಹಾರವೇಷ್ಟು ಗೋತ್ತಾ?
-
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ
-
ನೆಲ್ಯಾಡಿಯಲ್ಲಿ ಉದ್ಯಮಿಯ ಪುತ್ರಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ
-
ಯುವ ಧೂಮಪಾನಿಗಳಿಗೆ ಬಂದಿದೆ ಕೇಂದ್ರ ಸರ್ಕಾರದ ಹೊಸ ‘ಬಿಲ್ಲು’!
-
ಯುಪಿಐ ವಹಿವಾಟುಗಳ ಮೇಲೆ ಚಾರ್ಜ್ ಮಾಡ್ತಾರಾ?
-
ಇನ್ಮುಂದೆ ಜಾತಿ ನಮೂದಿಸಿರುವ ವಾಹನಗಳು ಸೀಜ್: ಬಂದಿದೆ ಹೊಸ ರೂಲ್ಸ್
You must be logged in to post a comment Login