Connect with us

    FILM

    ಪದ್ಮಾವತಿ ಪದ್ಮಾವತ್‌ ಆದರೂ ಹಠ ಬಿಡದ ಕರ್ಣಿ ಸೇನೆ : ಚಿತ್ರ ಬಿಡುಗಡೆಗೆ ಭಾರಿ ವಿರೋಧ

     ಪದ್ಮಾವತಿ ಪದ್ಮಾವತ್‌ ಆದರೂ ಹಠ ಬಿಡದ ಕರ್ಣಿ ಸೇನೆ : ಚಿತ್ರ ಬಿಡುಗಡೆಗೆ ಭಾರಿ ವಿರೋಧ

    ನವದೆಹಲಿ, ಜನವರಿ 05 : ದೇಶಾದ್ಯಂತ ತೀವ್ರ ಚರ್ಚೆ ಹಾಗೂ ವಿರೋಧ ವ್ಯಕ್ತವಾಗಿರುವ ಪದ್ಮಾವತಿಗೆ ಚಲನ ಚಿತ್ರ ತನ್ನ ಹೆಸರು ಬದಲಾವಣೆಯಾದರೂ ಬಿಡುಗಡೆಗೆ ರಜಪೂತ ಕರ್ಣಿ ಸೇನೆ ತೀವ್ರ ವಿರೋಧ ವ್ಯಕ್ತ ಪಡಿಸಿದೆ.

    ಐತಿಹಾಸಿಕ ಕಥಾ ಹಂದರವಿರುವ ಈ ಚಿತ್ರಕ್ಕೆ ಕೇಂದ್ರ ಸೆನ್ಸಾರ್‌ ಮಂಡಳಿ U/A ಸರ್ಟಿಫಿಕೇಟ್‌ ನೀಡಿ ಚಿತ್ರದ ಹೆಸರನ್ನು ‘ಪದ್ಮಾವತ್‌’ ಎಂದು ಬದಲಾಯಿಸುವಂತೆ ಸೂಚಿಸಿದೆ.

    ಇದಾದ ಬಳಿಕವೂ ರಜಪೂತ್‌ ಕರ್ಣಿ ಸೇನೆ ಚಿತ್ರದ ವಿರುದ್ಧ ಹೋರಾಟ ಮುಂದುವರಿಸಿದೆ.

    ಈ ಬಗ್ಗೆ ಹೇಳಿಕೆ ನೀಡಿರುವ ರಜಪೂತ ಕರ್ಣಿ ಸೇನೆಯ ಅಧ್ಯಕ್ಷ ಸುಖ್‌ದೇವ್‌ ಸಿಂಗ್‌ ಗೋಗಾಮೆಡಿ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವೆ ಸ್ಮೃತಿ ಇರಾನಿ ಹಾಗೂ ಕೇಂದ್ರ ಸೆನ್ಸಾರ್‌ ಮಂಡಳಿ ಅಧ್ಯಕ್ಷ ಪ್ರಸೂನ್‌ ಜೋಷಿ ವಿರುದ್ಧ ಹರಿಹಾಯ್ದಿದ್ದಾರೆ.

    ‘ಕೇಂದ್ರ ಸರಕಾರ ಲಾಭಕ್ಕಾಗಿ ಇಲ್ಲಾ ಯಾವ ಕಾರಣಕ್ಕಾಗಿ ಚಿತ್ರಕ್ಕೆ ಬೆಂಬಲ ಸೂಚಿಸುತ್ತಿದೆ.

    ‘ಚಿತ್ರಕ್ಕೆ ಸರ್ಟಿಫಿಕೇಟ್‌ ನೀಡುವ ವೇಳೆ ನಮ್ಮನ್ನೇಕೆ ಚಿತ್ರ ವೀಕ್ಷಣೆಗೆ ಸೆನ್ಸಾರ್‌ ಮಂಡಳಿ ಕರೆದಿಲ್ಲ’

    ಹಿಂದುತ್ವದ ಪಾಠ ಕಲಿಸಿರುವ ಹಿಂದೂ ಪರ ಸಂಘಟನೆಗಳು ಚಿತ್ರದ ಕುರಿತಾಗಿ ಯಾಕೆ ಸುಮ್ಮನೆ ಕುಳಿತಿವೆ’ ಎಂದು ಕಿಡಿ ಕಾರಿದರು.

    ಕೇಂದ್ರ ಸರಕಾರ ಗಮನಿಸಬೇಕು. ಚಿತ್ರವನ್ನು ನೋಟ್‌ ಬ್ಯಾನ್‌ ಆದ ಅವಧಿಯಲ್ಲಿ ವಿದೇಶಿ ಕಂಪೆನಿ Viacom18 ಮೋಷನ್‌ ಪಿಕ್ಚರ್ಸ್‌ ನಿರ್ಮಿಸಿದೆ.

    ಆ ಸಮಯದಲ್ಲಿ ನಮಗೆ ನಾಲ್ಕು ಸಾವಿರ ಸಿಗುವುದು ಕಷ್ಟವಾದ ಕಾಲದಲ್ಲಿ, ಸಂಜಯ್‌ ಲೀಲಾ ಬನ್ಸಾಲಿಗೆ 160 ರಿಂದ 180 ಕೋಟಿ ರೂಪಾಯಿ ಹೇಗೆ ಸಿಕ್ಕಿತು’ ಎಂದು ಖಾರವಾಗಿ ಪ್ರಶ್ನಿಸಿದರು.

    ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಮುಂದಿನ ದಿನಗಳಲ್ಲಿ ಚಿತ್ರದ ಕುರಿತು ಉಗ್ರ ಹೋರಾಟ ನಡೆಸುತ್ತೇವೆ.

    ಸಚಿವೆ ಇರಾನಿ ಮತ್ತು ಪ್ರಸೂನ್‌ ಜೋಷಿ ಅವರ ಪ್ರತಿಕೃತಿಗಳನ್ನು ದಹಿಸುತ್ತೇವೆ’ ಎಚ್ಚರಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply