Connect with us

    LATEST NEWS

    ಹಿಂದುಳಿದ ಸಮಾಜ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಗೆ ಸಂಪೂರ್ಣ ಬೆಂಬಲ – ವಿಶ್ವಾಸ್ ಕುಮಾರ್ ದಾಸ್

    ಮಂಗಳೂರು ಎಪ್ರಿಲ್ 24: ಹಿಂದುಳಿದ ಸಮಾಜ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಗೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಎಂದು ದ.ಕ ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್ ಹೇಳಿದ್ದಾರೆ.


    ಈ ಕುರಿತು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಹಿಂದುಳಿದ ಸಮಾಜದ ಬಂಧುಗಳು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರನ್ನು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸವಿದೆ. ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಹಾಗೂ ವೀರಪ್ಪ ಮೊಯ್ಲಿಯಂತಹ ಹಿಂದುಳಿದ ಸಮಾಜದ ನಾಯಕರು ಜಿಲ್ಲೆಗೆ ಅಪಾರ ಕೊಡುಗೆಯನ್ನು ಸಲ್ಲಿಸಿದ್ದಾರೆ. ಈ ಭಾರಿ ಹಿಂದುಳಿದ ಸಮಾಜದ ನಾಯಕನಾಗಿರುವ ಪದ್ಮರಾಜ್ ಅವರಿಗೆ ಹಿಂದುಳಿದ ಸಮಾಜದ ಬೆಂಬಲಕ್ಕೆ ನಿಂತಿದೆ. ಹಾಗಾಗಿ ಅವರು ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಅವರು ಹೇಳಿದರು. ಇನ್ನು ಸರ್ಕಾರ ದ ಗ್ಯಾರಂಟಿ ಯೋಜನೆಯ ಹಿಂದುಳಿದ ಸಮಾಜಕ್ಕೆ ದೊಡ್ಡ ಮಟ್ಟದ ನೆರವಾಗಿದೆ. ಕೇಂದ್ರ ಸರ್ಕಾರದ ಬೆಲೆ ಏರಿಕೆಯಿಂದ ಜನರಿಗೆ ಜೀವನ ಸಾಗಿಸಲು ಕಷ್ಟದಾಯಕವಾದ ಸನ್ನಿವೇಶದಲ್ಲಿ ರಾಜ್ಯ ಸರ್ಕಾರ ಕೊಟ್ಟಿರುವ ಗ್ಯಾರಂಟಿ ಹಲವು ಮಂದಿಗೆ ಆಸರೆಯಾಗಿದೆ. ಜೊತೆಗೆ ಜಿಲ್ಲೆಯ ಹಿಂದುಳಿದ ವರ್ಗ ಸಮಾಜಕ್ಕೂ ಸಾಕಷ್ಟು ಪ್ರಯೋಜನವಾಗಿದೆ. ಹಾಗಾಗಿ ಈ ಬಾರಿಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ನಿಶ್ಚಿತ ಅಂತಾ ಹೇಳಿದರು.

    Share Information
    Advertisement
    Click to comment

    You must be logged in to post a comment Login

    Leave a Reply