LATEST NEWS
ಪಡೀಲ್ ಅಂಡರ್ ಪಾಸ್ ಬಳಿ ಸಿಕ್ಕಿ ಹಾಕಿಕೊಂಡ ಲಾರಿ
ಮಂಗಳೂರು ನವೆಂಬರ್ 17: ನಗರದ ಪಡೀಲ್ ಅಂಡರ್ ಪಾಸ್ ನಲ್ಲಿ ಎಂಆರ್ಪಿಎಲ್ ಗೆ ಸಂಬಂಧಿಸಿದ ಸಾಮಗ್ರಿಗಳನ್ನು ಹೊತ್ತು ಸಾಗುತ್ತಿದ್ದ ಬೃಹತ್ ಗಾತ್ರದ ಎರಡು ಲಾರಿಗಳು ಸಂಚರಿಸಲಾಗದೆ ಅರ್ಧದಲ್ಲೇ ಬಾಕಿಯಾದ ಘಟನೆ ನಡೆದಿದ್ದು, ಇದರಿಂದಾಗಿ ಈ ಪ್ರದೇಶದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗಿದೆ.
ಗುಜರಾತಿನಿಂದ ಎಂಆರ್ಪಿಎಲ್ ಕಂಪೆನಿಗೆ ಸಂಬಂಧಿಸಿದ ಸಾಮಗ್ರಿಗಳನ್ನು ಹೊತ್ತ ಎರಡು ಬೃಹತ್ ಲಾರಿಗಳು ಸೋಮವಾರ ರಾತ್ರಿಯ ವೇಳೆ ರಾಷ್ಟ್ರೀಯ ಹೆದ್ದಾರಿಯ ಪಡೀಲ್ ಅಂಡರ್ ಪಾಸ್ ಬಳಿ ತಲುಪಿದೆ. ಲಾರಿಯಲ್ಲಿದ್ದ ಸಾಮಗ್ರಿಗಳು ಬೃಹತ್ ಗಾತ್ರದಲ್ಲಿರುವ ಕಾರಣ ಪಡೀಲ್ ಅಂಡರ್ ಪಾಸ್ ನಲ್ಲಿ ಸಂಚರಿಸಲಾಗದೆ ಅಂಡರ್ ಪಾಸ್ ಬಳಿ ನಿಂತಿವೆ. ಇದರಿಂದ ಇತರ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗಿದೆ.
You must be logged in to post a comment Login