ಬೆಂಗಳೂರು ನವೆಂಬರ್ 02: ಆ್ಯಂಬುಲೆನ್ಸ್ ಒಂದು ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಮೃತಪಟ್ಟು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ವಿಲ್ಸನ್ ಗಾರ್ಡನ್‌ನ ಕೆ.ಎಚ್. ರಸ್ತೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ದ್ವಿಚಕ್ರ ವಾಹನದಲ್ಲಿದ್ದ ಇಸ್ಮಾಯಿಲ್ ಹಾಗೂ ಸಮೀನ್ ಬಾನು ಮೃತರು ಎಂದು ತಿಳಿದು ಬಂದಿದೆ. ಆ್ಯಂಬುಲೆನ್ಸ್ ಶಾಂತಿನಗರದಿಂದ ಲಾಲ್‌ಬಾಗ್ ಕಡೆಗೆ ಅತ್ಯಂತ ವೇಗವಾಗಿ ಚಲಿಸುತ್ತಿತ್ತು. ಇಸ್ಮಾಯಿಲ್ ನಥನ್ ದಬಾಪು(40) ಮತ್ತು ಅವರ ಪತ್ನಿ ಸಮೀನಾ ಬಾನು(33) ಪ್ರಯಾಣಿಸುತ್ತಿದ್ದ ಸುಜುಕಿ ಬೈಕ್‌ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ನಿಯಂತ್ರಣ ತಪ್ಪಿದ್ದ ಆ್ಯಂಬುಲೆನ್ಸ್ ಮತ್ತೆ ಮೊಹಮ್ಮದ್ ರಯಾನ್ (29) ಮತ್ತು ಹಿಂಬದಿ ಸವಾರ ಮೊಹಮ್ಮದ್ ಸಿದ್ದಿಕ್ (32) ಪ್ರಯಾಣಿಸುತ್ತಿದ್ದ ಹೊಂಡಾ ಡಿಯೊ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ.
Read This — ವಾಟ್ಸಪ್ ಗೆ ಬಂದ ಎಪಿಕೆ ಪೈಲ್ ಡೌನ್ ಲೋಡ್ ಮಾಡಿ 3 ಲಕ್ಷ ಕಳೆದುಕೊಂಡ ಮಂಗಳೂರಿನ ಅಜ್ಜ
ಡಿಕ್ಕಿಯ ರಭಸಕ್ಕೆ ಬೈಕ್ ಸವಾರರು ಕೆಳಗೆ ಬಿದ್ದಿದ್ದಾರೆ. ಬಳಿಕ, ಪಾದಚಾರಿ ಮಾರ್ಗದಲ್ಲಿರುವ ಟ್ರಾಫಿಕ್ ಸಿಗ್ನಲ್ ಆಪರೇಟರ್ ಬಾಕ್ಸ್‌ಗೆ ಡಿಕ್ಕಿ ಹೊಡೆದ ನಂತರ ಆ್ಯಂಬುಲೆನ್ಸ್ ನಿಂತಿದೆ. ಘಟನೆಯ ನಂತರ, ಉದ್ರಿಕ್ತಗೊಂಡ ಸ್ಥಳೀಯರು ಆ್ಯಂಬುಲೆನ್ಸ್ ಅನ್ನು ತಳ್ಳಿ ಉರುಳಿಸಿದ್ದಾರೆ.



