Connect with us

DAKSHINA KANNADA

NEP ವಿರೋಧಿಸಿ ಸಚಿವ ಅಶ್ವತ್ಥ ನಾರಾಯಣ್​ಗೆ ‌ಮುತ್ತಿಗೆ ಯತ್ನ: 50ಕ್ಕೂ ಹೆಚ್ಚು CFI ಕಾರ್ಯಕರ್ತರು ವಶಕ್ಕೆ

ಮಂಗಳೂರು, ಅಗಸ್ಟ್ 30: ಮಂಗಳೂರು ವಿವಿ ಆವರಣದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ್ ಅವರಿಗೆ ‌ಮುತ್ತಿಗೆ ಹಾಕಲು ಯತ್ನಿಸಿದ 50ಕ್ಕೂ ಅಧಿಕ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ಮಂಗಳೂರು ವಿವಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಚಾಲನೆ ನೀಡಲು ಉನ್ನತ ಶಿಕ್ಷಣ ಸಚಿವರಾಗಿರುವ ಡಾ.ಅಶ್ವತ್ಥ ನಾರಾಯಣ್ ಆಗಮಿಸಿದ್ದರು. ಈ ಸಂದರ್ಭ ಸಿಎಫ್​ಐ ಕಾರ್ಯಕರ್ತರು ವಿವಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

ವಿವಿ ಅವರಣದಲ್ಲಿ ಭಾರಿ ಪೊಲೀಸ್ ಭದ್ರತೆ ಮಧ್ಯೆಯೂ ಪ್ರತಿಭಟನಾಕಾರರು ಏಕಾಏಕಿ ಆಗಮಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ವಿವಿಯೊಳಗೆ ನುಗ್ಗಲು ಬಿಡದೆ, ವಿವಿ ಕ್ಯಾಂಪಸ್ ಆವರಣದಲ್ಲಿಯೇ ಕಾರ್ಯಕರ್ತರನ್ನು ವಶಕ್ಕೆ ಪಡೆದರು‌.

ಸುಮಾರು 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು, ಪೊಲೀಸ್​ ವ್ಯಾನ್​ಗೆ ತುಂಬಿಕೊಂಡು ಠಾಣೆಗೆ ತೆರಳಿದರು.