Connect with us

    LATEST NEWS

    ಕಳೆದ ವರ್ಷ ದೇವಸ್ಥಾನದ ಆನ್ ಲೈನ್ ಸೇವೆಯಿಂದ 49.50 ಲಕ್ಷ ಆದಾಯ ಬಂದಿದೆ – ಕೋಟ ಶ್ರೀನಿವಾಸ ಪೂಜಾರಿ

    ಕಳೆದ ವರ್ಷ ದೇವಸ್ಥಾನದ ಆನ್ ಲೈನ್ ಸೇವೆಯಿಂದ 49.50 ಲಕ್ಷ ಆದಾಯ ಬಂದಿದೆ – ಕೋಟ ಶ್ರೀನಿವಾಸ ಪೂಜಾರಿ

    ಉಡುಪಿ ಮೇ.23: ದೇವಸ್ಥಾನಗಳಲ್ಲಿ ಆನ್‌ಲೈನ್‌ ಸೇವೆಗೆ ವ್ಯಕ್ತವಾಗುತ್ತಿರುವ ವಿರೋಧದ ಬಗ್ಗೆ ಮುಜರಾಯಿ ಖಾತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದ್ದಾರೆ. ಲಾಕ್‌ಡೌನ್‌ನಿಂದಾಗಿ ಭಕ್ತರಿಗೆ ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಆನ್‌ಲೈನ್‌ ಸೇವೆಗೆ ಆಧ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದ ಅವರ ಆನ್‌ಲೈನ್ ಸೇವೆ ಬಗ್ಗೆ ಕೆಲವರು ಆಕ್ಷೇಪ ಮಾಡಿದ್ದಾರೆ. ಆದರೆ ಆನ್ ಲೈನ್ ಸೇವೆ ನಮ್ಮ ಇಲಾಖೆಯಲ್ಲಿ ಈ ಮೊದಲೇ ಇತ್ತು. ಈಗ ಮತ್ತಷ್ಟು ದೇವಸ್ಥಾನಗಳನ್ನು ಆನ್‌ಲೈನ್ ಸೇವೆಯ ವ್ಯಾಪ್ತಿಗೆ ಇಲಾಖೆ ತರಲಾಗುತ್ತಿದೆ ಎಂದರು.

    ಕೊಲ್ಲೂರು ದೇವಸ್ಥಾನದಲ್ಲಿ ಕಳೆದ ವರ್ಷ ಮೂರು ಸಾವಿರ ಆನ್‌ಲೈನ್‌ ಸೇವೆಗಳು ಬಂದಿವೆ. ಮೈಸೂರು ಚಾಮುಂಡೇಶ್ವರಿ ದೇವಸ್ಥಾನದಲ್ಲೂ ಆನ್‌ಲೈನ್ ಸೇವೆಯಿದೆ. ಕಳೆದ ವರ್ಷ ಈ ಆನ್‌ಲೈನ್ ಸೇವೆಯಿಂದ 49.50 ಲಕ್ಷ ರುಪಾಯಿ ಜಮಾ ಆಗಿದೆ ಎಂದು ತಿಳಿಸಿದರು. ಇನ್ನು ಹರಕೆ ಹೊತ್ತ ಭಕ್ತರಿಗೆ ಆನ್‌ಲೈನ್‌ಸೇವೆ ಅನುಕೂಲವಾಗಲಿದೆ. ಭಕ್ತರಿಗೆ ನೆಮ್ಮದಿ ಸಿಗಲಿ ಎಂಬ ಕಾರಣಕ್ಕೆ ಆನ್‌ಲೈನ್‌ಸೇವೆಯನ್ನು ಆರಂಭಿಸಲಾಗಿದೆ.

    ಲಾಕ್‌ಡೌನ್‌ಮುಗಿಯುವವರೆಗೂ ಆನ್‌ಲೈನ್ ಸೇವೆ ಮುಂದುವರಿಯಲಿದೆ ಎಂದರು. ಇನ್ನು ದೇವಸ್ಥಾನಗಳಲ್ಲಿ ಪೂಜೆಗಳು ನಡೆಯುತ್ತಿಲ್ಲ, ಬಾಗಿಲು ಮುಚ್ಚಲಾಗಿದೆ ಅಂತ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಆದ್ರೆ ಎಲ್ಲಾ ದೇವಾಲಯಗಳಲ್ಲಿಯೂ ಸಾಂಪ್ರಾದಾಯಿಕ ಪೂಜೆ ನಡೆಯುತ್ತಿದೆ. ಆದ್ರೆ ಭಕ್ತರಿಗೆ ಅವಕಾಶ ಇಲ್ಲ. ಕೊರೋನಾ ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆಯಿದೆ. ಹೀಗಾಗಿ ಲಾಕ್‌ಡೌನ್‌ನಂತರವಷ್ಟೇ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ಅವಕಾಶ ನೀಡಲಾಗುತ್ತೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸ್ಪಷ್ಟನೆ ನೀಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply