BELTHANGADI
ಒಂದು ವರ್ಷದ ಮಗು ಬಲಿ ಪಡೆದ ಆಟೋ….!!
ಬೆಳ್ತಂಗಡಿ ಜನವರಿ 31:ಆಟೋ ರಿಕ್ಷಾವೊಂದು ಸೇತುವೆ ಡಿಕ್ಕಿ ಹೊಡೆದ ಪರಿಣಾಮ ಆಟೋ ರಿಕ್ಷಾದಲ್ಲಿದ್ದ ಒಂದು ವರ್ಷದ ಗಂಡು ಮಗು ಸಾವನ್ನಪ್ಪಿದ ಘಟನೆ ಬೆಳ್ತಂಗಡಿಯ ಮಾಲಾಡಿಯಲ್ಲಿ ನಡೆದಿದೆ. ಕಾರ್ಕಳ ತಾಲೂಕಿನ ನಿಟ್ಟೆ ನಿವಾಸಿಯಾದ ಸಂತೋಷ್ ಮತ್ತು ಗೀತಾ ದಂಪತಿಗಳ ಒಂದು ವರ್ಷ ಎರಡು ತಿಂಗಳ ಗಂಡು ಮಗು ಅತರ್ವ ಸಾವನಪ್ಪಿದೆ.
ಜನವರಿ 30 ರಂದು ಗೀತಾ ಅವರು ತಂಗಿ ಮನೆಯಾದ ಶಂಬೂರು ಎಂಬಲ್ಲಿಗೆ ಹೋಗಿ ವಾಪಾಸ್ ಬರುತ್ತಿದ್ದಾಗ ಆಟೋ ರಿಕ್ಷಾ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಮಗು ಅತರ್ವ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ತಕ್ಷಣ ಮಂಗಳೂರು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಿಸದೆ ಸಂಜೆ ಮಗು ಸಾವನ್ನಪ್ಪಿದೆ.
ಆಟೋ ಚಾಲಕನ ನಿರ್ಲಕ್ಷ್ಯತನದ ಚಾಲನೆಯಿಂದ ಮಗು ಸಾವಿಗೆ ಕಾರಣವಾಗಿರುವ ಬಗ್ಗೆ ಆಟೋ ಚಾಲಕನ ದಯಾನಂದ ವಿರುದ್ಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login