FILM
ಕಿರುತೆರೆಯಲ್ಲಿ ಮಿಂಚುತ್ತಿರುವ ಕುಂದಾಪುರದ ಪ್ರತಿಭೆ ನಾಗಿನಿ ಸಿರಿಯಲ್ ಅರ್ಜುನ್ ಆಲಿಯಾಸ್ ದೀಕ್ಷಿತ್ ಶೆಟ್ಟಿ ಜೊತೆ ಸಂದರ್ಶನ
ಕಿರುತೆರೆಯಲ್ಲಿ ಮಿಂಚುತ್ತಿರುವ ಕುಂದಾಪುರದ ಪ್ರತಿಭೆ ನಾಗಿನಿ ಸಿರಿಯಲ್ ಅರ್ಜುನ್ ಆಲಿಯಾಸ್ ದೀಕ್ಷಿತ್ ಶೆಟ್ಟಿ ಜೊತೆ ಸಂದರ್ಶನ
:Suni
ಮಂಗಳೂರು ಮೇ 14: ಫುಲ್ ಫಿಟ್ ಆಗಿರೋ ದೇಹ ಸೌಂದರ್ಯ, ನೋಡೋಕೆ ಬೆಳ್ಳಗೆ, ಒಂದ್ಸಾರಿ ನೋಡಿದ ಕೂಡಲೇ ಕ್ಯೂಟ್-ಕ್ಯೂಟ್ ಅಂತ್ಹೆನಿಸೋ ಮುದ್ದು ಮುಖ, ಒಟ್ಟಾರೆ ತನ್ನ ಹ್ಯಾಂಡ್ಸಮ್ ಲುಕ್ ನಿಂದಲೇ ಹುಡುಗಿಯರ ಹೃದಯ ಕದ್ದ ಚೋರ.
ಈತ ಬೇರಾರು ಅಲ್ಲ ನಾಗಿನಿ ಧಾರಾವಾಹಿಯ ಅರ್ಜುನ್ ಅಲಿಯಾಸ್ ದೀಕ್ಷಿತ್ ಶೆಟ್ಟಿ. ಮೂಲತಃ ಕುಂದಾಪುರ ಮೂಲದವರಾದ ದೀಕ್ಷಿತ್ ಶೆಟ್ಟಿಯವರು ಕರಿ ಕೋಟು ಧರಿಸಿ ವಾದ-ವಿವಾದ ಮಾಡೋ ವಕೀಲರಾಗಬೇಕಿತ್ತು. ಆದ್ರೆ ಕಲಾವಿದನಾಗಬೇಕು, ನಟನಾಗಬೇಕೆಂಬ ಅದಮ್ಯ ಆಸೆಯಿಂದ ಕ್ಯಾಮೆರಾ ಎದುರಿಸುತ್ತಾರೆ. ಸದ್ಯ ನಟನಾ ಕ್ಷೇತ್ರದಲ್ಲಿ ಯಶಸ್ವಿಯಾಗಿರುವ ದೀಕ್ಷಿತ್ ಶೆಟ್ಟಿ ‘ನಾಗಿನಿ’ ಸೀರಿಯಲ್ ಮೂಲಕ ಎಲ್ಲರ ಮನೆಮಗನಾಗಿ ಬೆಳೆದು ಬಿಟ್ಟಿದ್ದಾರೆ.
ಬಾಲ್ಯದಿಂದಲೇ ನಾಟಕದಲ್ಲಿ ನಟನಾ ಗೀಳು ಹತ್ತಿಸಿಕೊಂಡಿದ್ದ ದೀಕ್ಷಿತ್ ‘ಪ್ರೀತಿ ಎಂದರೇನು’ ಎಂಬ ಧಾರಾವಾಹಿಯಲ್ಲಿ ಪೋಷಕ ಪಾತ್ರದ ಮೂಲಕ ಮೊತ್ತ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿ, ತಮ್ಮ ಸೀರಿಯಲ್ ಅಭಿಯಾನಕ್ಕೆ ಮುನ್ನುಡಿ ಬರೆಯುತ್ತಾರೆ.
ಯಾರ ತಂಟೆಗೂ ಹೋಗದೆ ಸಖತ್ ಸೈಲೆಂಟ್ ಆಗಿರೋ ದೀಕ್ಷಿತ್, ಲಕ್ ಗಿಂತಲೂ ಹೆಚ್ಚು ಹಾರ್ಡ್ ವರ್ಕ್ ನ್ನ ನಂಬ್ತಾರೆ ಹಾಗೂ ಇಷ್ಟಪಡ್ತಾರಂತೆ. ಜಿಮ್ ನಲ್ಲಿ ಕಸರತ್ತು ಮಾಡಿ ಬಾಡಿ ಫಿಟ್ ಮಾಡಿಕೊಂಡಿರೋ ದೀಕ್ಷಿತ್ ಸದ್ಯ ಕಲರಿ ಪಟ್ಟು ಕೂಡ ಕಲಿತಾ ಇದ್ದಾರಂತೆ.
ಕರಾವಳಿ ಹುಡುಗನಾಗಿರೋ ದೀಕ್ಷಿತ್ ಇತ್ತೀಚೆಗಷ್ಟೇ ಮಂಗಳೂರಿಗೆ ಭೇಟಿ ಇತ್ತಾಗ ‘ಮಂಗಳೂರು ಮಿರರ್’ ನ ‘ಮಿರರ್ ಇಮೇಜ್’ ಜೊತೆ ಹರಟಿದ್ದಾರೆ. ಅಷ್ಟಕ್ಕೂ ದೀಕ್ಷಿತ್ ಶೆಟ್ಟಿ ಅದೇನೇನ್ ಹಂಚಿಕೊಂಡಿದ್ದಾರೆ ನೋಡೋಕೆ ಈ ಸಂದರ್ಶನ ತುಣುಕು ನೋಡಿ..
You must be logged in to post a comment Login