LATEST NEWS
ವಿವಾದಾತ್ಮಕ ಗೋಡೆ ಬರಹ ಓರ್ವ ಆರೋಪಿಯನ್ನು ಬಂಧಿಸಿದ ಪೊಲೀಸರು
ಮಂಗಳೂರು ಡಿಸೆಂಬರ್ 3: ಮಂಗಳೂರು ನಗರದಲ್ಲಿ ಉಗ್ರರ ಪರ ಗೊಡೆ ಬರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ತೀರ್ಥಹಳ್ಳಿಯ ನಝೀರ್ ಮುಹಮ್ಮದ್ (26)ಎಂದು ಗುರುತಿಸಲಾಗಿದೆ.
ಕದ್ರಿ ಪೊಲೀಸರು ಗುರುವಾರ ಮುಂಜಾನೆ ಆತನನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಮೊಬೈಲ್ ದಾಖಲೆ ಆಧಾರದಲ್ಲಿ ಆತನನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.
ನವೆಂಬರ್ 27 ರಂದು ಬಿಜೈ ಬಳಿ ಅಪಾರ್ಟ್‌ಮೆಂಟ್ ಒಂದರ ಕೌಂಪೌಂಡ್‌ನ ಮೇಲೆ, ಸಂಘಿಗಳನ್ನು ಎದುರಿಸಲು ಲಷ್ಕರ್ ಇ ತೋಯ್ಬಾ ಹಾಗೂ ತಾಲಿಬಾನ್‌ಗೆ ಆಹ್ವಾನ ನೀಡುವಂತೆ ನಮ್ಮನ್ನು ಪ್ರೇರೇಪಿಸಬೇಡಿ (“Do not force us to invite Lashkar-e-Toiba and Taliban to Deal with Sanghis and Manvedis”) ಎಂದು ಬರೆದಿದ್ದು ಹ್ಯಾಷ್ ಟ್ಯಾಗ್ ಹಾಕಿ, “ಲಷ್ಕರ್ ಜಿಂದಾಬಾದ್” ಎಂದು ಕೂಡಾ ಬರೆಯಲಾಗಿತ್ತು.
ಇದಾದ ಎರಡು ದಿನಗಳ ನಂತರ ನವೆಂಬರ್ 29 ರಂದು ಮಂಗಳೂರಿನ ಕೋರ್ಟ್ ರಸ್ತೆಯ ಆವರಣದಲ್ಲಿ ಹಳೆ ಪೊಲೀಸ್ ಔಟ್ ಪೋಸ್ಟ್ ನ ಗೊಡೆ ಮೇಲೆ ಉರ್ದುವಿನಲ್ಲಿ ವಿವಾದಾತ್ಮಕ ಬರಹ ಬರೆಯಲಾಗಿತ್ತು.
Facebook Comments
You may like
-
ಕಟ್ಟಿಗೆಯಲ್ಲಿ ಹಲ್ಲೆ ಮಾಡಿ ತಂದೆಯನ್ನೇ ಕೊಲೆ ಮಾಡಿದ ಮಗ
-
ಅನುಮತಿ ಇಲ್ಲದೆ ಡ್ರೋನ್ ಬಳಸಿದರೆ ಕಠಿಣ ಕ್ರಮ – ಪೊಲೀಸ್ ಆಯುಕ್ತರ ಎಚ್ಚರಿಕೆ
-
ಸಹಾಯದ ನೆಪದಲ್ಲಿ ಮದ್ಯವಯಸ್ಸಿನ ಮಹಿಳೆ ಹಾಗೂ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನ..ಎಸ್ ಡಿಪಿಐ ಮುಖಂಡನ ಮೇಲೆ ಪೋಕ್ಸೋ ಪ್ರಕರಣ ದಾಖಲು
-
ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಕೊಳೆತ ಭ್ರೂಣದ ಅವಶೇಷ ಪತ್ತೆ..!!
-
ಪುತ್ತೂರು ಅಕ್ರಮ ಗಾಂಜಾ ಸಾಗಾಟಕ್ಕೆ ಯತ್ನ – 40 ಸಾವಿರ ಮೌಲ್ಯದ ಗಾಂಜಾ ವಶಕ್ಕೆ ಪಡೆದ ಪೊಲೀಸರು
-
ಕುಂಬಳೆ ಮೂಲದ ಯುವಕನಿಗೆ ಹನಿಟ್ರ್ಯಾಪ್ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಪೊಲೀಸ್ ವಶಕ್ಕೆ
You must be logged in to post a comment Login