ಚಂಡೀಗಢ ನವೆಂಬರ್ 26: ಬಾಸ್ಕೆಟ್ ಬಾಲ್ ಆಡುತ್ತಿರುವ ವೇಳೆ ಬಾಸ್ಕೆಟ್ ಬಾಲ್ ಕಂಬ ಬಿದ್ದು ರಾಷ್ಟ್ರಮಟ್ಟದ ಆಟಗಾರ ಮೃತಪಟ್ಟ ಘಟನೆ ಹರಿಯಾಣದ ರೊಹ್ಟಕ್‌ನಲ್ಲಿ ನಡೆದಿದೆ. ಮೃತನನ್ನು 16 ವರ್ಷದ ಹಾರ್ದಿಕ್‌ ಎಂದು ಗುರುತಿಸಲಾಗಿದೆ. ಘಟನೆಯ ಸಿಸಿಟಿವಿ ವೈರಲ್ ಆಗಿದೆ.


ಹಾರ್ಧಿಕ್ ಮೈದಾನದಲ್ಲಿ ಒಬ್ಬನೇ ಬಾಸ್ಕೆಟ್‌ ಬಾಲ್‌ ಆಡುತ್ತಿದ್ದ ವೇಳೆ ಹಾರ್ದಿಕ್‌, ಕಂಬವನ್ನು ನೇತಾಡಿದ್ದಾನೆ. ತಕ್ಷಣ ಕಂಬ ಮೈಮೇಲೆ ಬಿದ್ದಿದೆ. ಹಾರ್ದಿಕ್‌ ಮೇಲೆ ಕಂಬ ಬೀಳುತ್ತಿದ್ದಂತೆ ಸನಿಹದಲ್ಲಿದ್ದ ಸಹ ಆಟಗಾರರು ಸ್ಥಳಕ್ಕೆ ಬಂದು, ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಗಂಭೀರ ಗಾಯಗಳಾದ ಕಾರಣ ಹಾರ್ದಿಕ ಮೃತಪಟ್ಟಿದ್ದಾರೆ.

ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸರ್ಕಾರದ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. ಘಟನೆಯ ಬಳಿಕ ತಕ್ಷಣಕ್ಕೆ ಜಾರಿಗೆ ಬರುವಂತೆ ಜಿಲ್ಲಾ ಕ್ರೀಡಾ ಅಧಿಕಾರಿಯನ್ನು ಸರ್ಕಾರ ಅಮಾನತುಗೊಳಿಸಿದೆ.

Share Information