ಫರಿದಾಬಾದ್ ನವೆಂಬರ್ 04: 17 ವರ್ಷ ಬಾಲಕಿ ಮೇಲೆ ವ್ಯಕ್ತಿಯೊಬ್ಬ ಗುಂಡು ಹಾರಿಸಿದ ಘಟನೆ ರಾಷ್ಟ್ರ ರಾಜಧಾನಿಯ ದೆಹಲಿ ಗಡಿಯಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಹರಿಯಾಣದ ಫರಿದಾಬಾದ್ ಜಿಲ್ಲೆಯ ಬಲ್ಲಭಗಢದಲ್ಲಿ ನಡೆದಿದೆ. ಪ್ರಾಥಮಿಕ ವರದಿಗಳ ಪ್ರಕಾರ, ನಿನ್ನೆ ಸಂಜೆ ಬಲ್ಲಭಗಢದ ಶ್ಯಾಮ್ ಕಾಲೋನಿಯಲ್ಲಿ ಗುಂಡಿನ ದಾಳಿ ನಡೆದಿದೆ. ಹದಿಹರೆಯದ ಬಾಲಕಿ ಕೋಚಿಂಗ್ ಕ್ಲಾಸ್ ನಿಂದ ಹಿಂತಿರುಗುತ್ತಿದ್ದಾಗ ಆ ವ್ಯಕ್ತಿ ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ.

ಆರೋಪಿಯನ್ನು ಜತಿನ್ ಮಂಗ್ಲಾ ಎಂದು ಗುರುತಿಸಲಾಗಿದೆ. ದಾಳಿಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವಿಧ್ಯಾರ್ಥಿನಿ ಬರುತ್ತಿರುವ ವೇಳೆ ಬೈಕ್ ನಲ್ಲಿ ಬಂದಿದ್ದ ಆರೋಪಿ ಬಂದೂಕನ್ನು ಹಿಡಿದುಕೊಂಡು ಬಂದು ವಿಧ್ಯಾರ್ಥಿನಿಯ ಎದುರೇ ಪೈರಿಂಗ್ ಮಾಡಿದ್ದಾನೆ. 17 ವರ್ಷದ ಬಾಲಕಿಯ ಜೊತೆಗಿದ್ದ ಇಬ್ಬರು ಹುಡುಗಿಯರು ಭಯಭೀತರಾಗಿ ಓಡಿಹೋಗಿದ್ದಾರೆ. ಆರೋಪಿ ಎರಡು ಭಾರಿ ಗುಂಡು ಹಾರಿಸಿದ್ದು, ಒಂದು ಗುಂಡು ಬಾಲಕಿಯ ಭುಜಕ್ಕೆ ತಗುಲಿದರೆ, ಇನ್ನೊಂದು ಗುಂಡು ಆಕೆಯ ಹೊಟ್ಟೆಗೆ ತಗುಲಿದೆ. ಬಾಲಕಿ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಪೊಲೀಸರು ಪ್ರಕರಣ ದಾಖಲಿಸಿದ್ದು, ಅಪರಾಧಕ್ಕೆ ಬಳಸಲಾದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ದಾಳಿಕೋರ ಜತಿನ್ ಮಂಗ್ಲಾಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ ವಿಧ್ಯಾರ್ಥಿನಿ ಆರೋಪಿಗೆ ಪರಿಚಿತ ಎಂದು ಹೇಳಲಾಗಿದೆ. ಜತಿನ್ ಕೆಲವು ದಿನಗಳಿಂದ ಅವಳನ್ನು ಹಿಂಬಾಲಿಸುತ್ತಿದ್ದನೆಂದು ವಿಧ್ಯಾರ್ಥಿನಿಯ ಸಹೋದರಿ ಹೇಳಿದರು.
Stalker Shoots Teen Girl in NCR
17 yr old girl was shot twice by stalker Jatin Mangla while returning from coaching in Faridabad’s Shyam Colony. She’s stable in hospital
CCTV shows Jatin waiting in an alley before firing point-blank. The bullets hit her shoulder and grazed… pic.twitter.com/bFMX9BoAVR
— Nabila Jamal (@nabilajamal_) November 4, 2025



