ಪುಣೆ, ಮಾರ್ಚ್ 15: ಲಿಪ್ಟ್ ಬಾಗಿಲಿಗೆ ಮಗುವಿನ ಕೈಯೊಂದು ಸಿಕ್ಕಿಹಾಕಿಕೊಂಡ ಘಟನೆ ಮಹಾರಾಷ್ಟ್ರದ Puneಯ ಪಿಂಪ್ರಿ-ಚಿಂಚ್ವಾಡ್ನ ದಿಘಿ ಪ್ರದೇಶದ ಅಪಾರ್ಟ್ ಮೆಂಟ್ ಒಂದರಲ್ಲಿ ಸಂಭವಿಸಿದೆ,

ಇಬ್ಬರು ಮಹಿಳೆಯರು ಮಗುವನ್ನು ಎತ್ತಿಕೊಂಡು ಲಿಫ್ಟ್ಗೆ ಹತ್ತಿದ್ದರು. ಲಿಫ್ಟ್ನಿಂದ ಹೊರಬರುವ ವೇಳೆ ಮಹಿಳೆಯೊಬ್ಬರ ಕೈಯಲ್ಲಿದ್ದ ಮಗುವಿನ ಕೈ ಲಿಫ್ಟ್ ಬಾಗಿಲಿನ ನಡುವೆ ಸಿಲುಕಿಕೊಂಡಿದೆ. ಲಿಫ್ಟ್ನಲ್ಲಿದ್ದ ಇತರರು ಕೂಡಲೇ ಸಹಾಯಕ್ಕೆ ಮುಂದಾಗಿ ಹರಸಾಹಸ ಪಟ್ಟು ಮಗುವಿನ ಕೈಯನ್ನು ಬಾಗಿಲಿನಿಂದ ಬಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಮಗುವಿಗೆ ಗಂಭೀರ ಗಾಯವಾಗಿಲ್ಲ ಎಂದು ತಿಳಿದು ಬಂದಿದೆ.