Connect with us

BELTHANGADI

ತರಕಾರಿ ಅಂಗಡಿಗೆ ನುಗ್ಗಿದ ಕಾರು- ಅಪಾಯದಿಂದ ಪಾರಾದ ವಿಧ್ಯಾರ್ಥಿನಿಯರು

ಮಂಗಳೂರು ಜುಲೈ 17: ಓಮ್ನಿ ಕಾರೊಂದು ಇದ್ದಕ್ಕಿದ್ದ ಹಾಗೆ ಚಲಿಸಿ ತರಕಾರಿ ಅಂಗಡಿಯೊಂದರ ಒಳಗೆ ನುಗ್ಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆಯ ಎಸ್​ಡಿಎಂ ಕಾಲೇಜು ಬಳಿ ನಡೆದಿದೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.


ಶಾರ್ವರಿ ಕಾಂಪ್ಲೆಕ್ಸ್ ಬಳಿ ಓಮ್ನಿ ಕಾರನ್ನು ನಿಲ್ಲಿಸಿದ ಮಾಲೀಕ, ಅದರಲ್ಲಿ ಮಗುವನ್ನು ಬಿಟ್ಟಿದ್ದ, ಅಲ್ಲದೆ ಹ್ಯಾಂಡ್​ಲಾಕ್ ಕೂಡ​ ಮಾಡಿರಲಿಲ್ಲ. ಕಾರು ಇದ್ದಕ್ಕಿದ್ದಂತೆ ಚಲಿಸಿ ಶಾರ್ವರಿ ಕಾಂಪ್ಲೆಕ್ಸ್​ನಲ್ಲಿದ್ದ ತರಕಾರಿ ಅಂಗಡಿಗೆ ನುಗ್ಗಿದೆ.


ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಬ್ಬರು ಅಂಗಡಿಯಲ್ಲಿ ಖರೀದಿಯಲ್ಲಿ ತೊಡಗಿದ್ದರು. ಆದರೆ ಅಂಗಡಿಯತ್ತ ಕಾರು ನುಗ್ಗುತ್ತಿದ್ದಂತೆ ಹಿಂದಿರುಗಿ ನೋಡಿದ ವಿದ್ಯಾರ್ಥಿನಿಯರು ತಕ್ಷಣ ಪಕ್ಕಕ್ಕೆ ಸರಿದುಕೊಂಡಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ಮತ್ತೊಂದೆಡೆ ಕಾರಿನೊಳಗೆ ಇರುವ ಮಗು ಕೂಡ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯಕ್ಕೆ ಒಳಗಾಗದೆ ಬಚಾವಾಗಿದೆ. ಕಾರು ಬಂದು ಅಂಗಡಿಗೆ ನುಗ್ಗಿದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.