LATEST NEWS
ಜಯಪ್ರಕಾಶ್ ಹೆಗ್ಡೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ನೇಮಕ
ಉಡುಪಿ ನವೆಂಬರ್ 24: ಬಿಜೆಪಿ ಸೇರ್ಪಡೆಯಾದರೂ ಯಾವುದೇ ಸೂಕ್ತ ಸ್ಥಾನಮಾನ ಸಿಗದೇ ಹಾಗೆಯೇ ಇದ್ದ ಮಾಜಿ ಸಚಿವ, ಬಿಜೆಪಿ ಮುಖಂಡ ಕೆ. ಜಯಪ್ರಕಾಶ ಹೆಗ್ಡೆ ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷರಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಯ್ಕೆ ಮಾಡಿ ನೇಮಕಾತಿ ಆದೇಶ ಹೊರಡಿಸಿದ್ದಾರೆ.
ಉಡುಪಿಯಲ್ಲಿ ವರ್ಚಸ್ಸಿನ ನಾಯಕರಾಗಿರುವ ಜಯಪ್ರಕಾಶ್ ಹೆಗ್ಡೆಯವರನ್ನು ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಸಂದರ್ಭ ಪಕ್ಷಕ್ಕೆ ಬರಮಾಡಿಕೊಂಡಿತ್ತು. ಈ ಮೂಲಕ ಉಡುಪಿ ಚಿಕ್ಕಮಗಳೂರು ಸಂಸತ್ ಸ್ಥಾನ ಉಳಿಸಿಕೊಳ್ಳಲು ಸಾಧ್ಯವಾಗಿತ್ತು. ಆದರೆ ತದನಂತರ ಜಯಪ್ರಕಾಶ್ ಹೆಗ್ಡೆಯವರಿಗೆ ಯಾವುದೇ ರೀತಿಯ ಸೂಕ್ತ ಸ್ಥಾನಮಾನ ನೀಡದೇ ಹಾಗೆಯೇ ಅವರನ್ನು ನಡೆಸಿಕೊಂಡು ಬಂದಿತ್ತು. ಈ ನಡುವೆ ಜಯಪ್ರಕಾಶ್ ಹೆಗ್ಡೆಯವರ ಅಭಿಮಾನಿಗಳು ಬಿಜೆಪಿ ಈ ನಡೆಗೆ ಆಕ್ರೋಶವನ್ನು ಹೊರಹಾಕಿದ್ದರು.
ಈಗ ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷರಾಗಿ ಕೆ.ಜಯಪ್ರಕಾಶ್ ಹೆಗ್ಡೆ ಅವರನ್ನು ನೇಮಕ ಮಾಡುವ ಮೂಲಕ ಉಡುಪಿಯಲ್ಲಿ ಕುಸಿಯುತ್ತಿರುವ ಬಿಜೆಪಿ ವರ್ಚಸ್ಸನ್ನು ಮತ್ತೆ ಹೆಚ್ಚಿಸಲು ತಯಾರಿ ನಡೆಸಿದೆ.
ಕುಂದಾಪುರ ತಾಲೂಕಿನ ಕೊರ್ಗಿಯವರಾದ ಹೆಗ್ಡೆಯವರು ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿದ್ದ ಕೆ.ಚಂದ್ರಶೇಖರ ಹೆಗ್ಡೆಯವರ ಪುತ್ರ. ಉಚ್ಚ ನ್ಯಾಯಾಲಯದಲ್ಲಿ ವಕೀಲರಾಗಿ ಕಾರ್ಯನಿರ್ವಹಿಸಿದ್ದಾರೆ. ಹಿಂದಿನ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಿಂದ 2 ಬಾರಿ ಪಕ್ಷೇತರ ಶಾಸಕರಾಗಿ ಚುನಾಯಿತರಾದ ಹೆಗ್ಗಳಿಕೆ ಹೆಗ್ಡೆಯವರದ್ದು. ಬಳಿಕ ಜನತಾದಳ ಸೇರ್ಪಡೆಗೊಂಡ ಅವರು 1997ರಲ್ಲಿ ಜೆ.ಎಚ್. ಪಟೇಲರ ನೇತೃತ್ವದ ಜನತಾದಳ ಸರ್ಕಾರದಲ್ಲಿ ಮೀನುಗಾರಿಕಾ ಸಚಿವರಾಗಿ ಸೇವೆ ಸಲ್ಲಿಸಿದರು. 2009ರಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರಸ್‌ನಿಂದ ಸ್ಪರ್ಧಿಸಿ ಬಿಜೆಪಿಯ ಸದಾನಂದ ಗೌಡ ವಿರುದ್ಧ ಸೋತಿದ್ದರು. 2012ರಲ್ಲಿ ನಡೆದ ಉಪಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಬಿಜೆಪಿ ಚುನಾವಣಾ ಪ್ರಣಾಳಿಕೆ ಸಮಿತಿ ಸದಸ್ಯರಾಗಿದ್ದರು. ಆ ಬಳಿಕ ಅವರು ಬಿಜೆಪಿ ಸೇರ್ಪಡೆಯಾಗಿದ್ದರೂ ಸೂಕ್ತ ಸ್ತಾನಮಾನ ಸಿಕ್ಕಿರಲಿಲ್ಲ.
Facebook Comments
You may like
-
ನೂತನ ಸಚಿವರಿಗೆ ಖಾತೆ ಹಂಚಿಕೆ..ನೂತನ ಸಚಿವ ಅಂಗಾರರಿಗೆ ಮೀನುಗಾರಿಕೆ
-
ಶಾಸಕ ಯತ್ನಾಳ್ ಬಾಯಿ ಮುಚ್ಚದಿದ್ದರೆ ಕೇಂದ್ರ ನಾಯಕರಿಂದ ಸೂಕ್ತ ಕ್ರಮ – ಡಿವಿ ಸದಾನಂದ ಗೌಡ
-
ಒಂದೆರಡು ದಿನಗಳಲ್ಲಿ ಎಲ್ಲಾ ಭಿನ್ನಮತ ಶಮನ – ಬಿವೈ ರಾಘವೇಂದ್ರ
-
ಅಣ್ಣಾಮಲೈಯವರ ಅನುಭವದ ಬುತ್ತಿ ‘ಸ್ಟೆಪ್ಪಿಂಗ್ ಬಿಯಾಂಡ್ ಖಾಕಿ’ 18ರಂದು ಬಿಡುಗಡೆ
-
ಕೊರೊನಾ ಲಸಿಕೆ ವಿಚಾರದಲ್ಲೂ ಅಪಪ್ರಚಾರ ಮಾಡುತ್ತಿರುವುದು ದುರ್ದೈವ ಸಂಗತಿ
-
ಇವರ ಮಧ್ಯ ಕುಳಿತುಕೊಳ್ಳಲು ಕೊರೋನಾಕ್ಕೂ ಜಾಗ ಇಲ್ಲ….!!
You must be logged in to post a comment Login