ಮಂಗಳೂರು ನವೆಂಬರ್ 02:ವಾಟ್ಸಫ್ ಗೆ ಬಂದ ಎಪಿಕೆ ಫೈಲ್ ಡೌನ್ ಲೋಡ್ ಮಾಡಿ ಮಂಗಳೂರಿನ ಹಿರಿಯ ನಾಗರೀಕರೊಬ್ಬರು 3 ಲಕ್ಷ ಕಳೆದುಕೊಂಡ ಘಟನೆ ನಡೆದಿದೆ.


ಮಂಗಳೂರಿನ ನಿವಾಸಿ 74 ವರ್ಷ ಪ್ರಾಯದ ವೃದ್ದರೊಬ್ಬರು ದಿನಾಂಕ:25-10-2025 ರಂದು ಮೊಟರೋಲಾ ಕಂಪನಿಯ ವಾಷಿಂಗ್ ಮೆಷಿನ್ ಕೊಂಡುಕೊಳ್ಳಲು ಮೊಟರೋಲಾ ಕಂಪನಿಯ ಸರ್ವಿಸ್ ಬಗ್ಗೆ ತಿಳಿದುಕೊಳ್ಳಲು ಗೂಗಲ್ ನಲ್ಲಿ ಮೋಟರೋಲಾ ವಾಷಿಂಗ್ ಮಷಿನ್ ಸೆಂಟರ್ ಮಂಗಳೂರು ಎಂದು ಸರ್ಚ್ ಮಾಡಿದ್ದಾರೆ. ಈ ವೇಳೆ 7505078758 ನಂಬರ್ ದೊರಕಿದ್ದು ಈ ನಂಬರ್ ನಿಂದ ದೂರುದಾರರ ವಾಟ್ಸಪ್ ನಂಬರಿಗೆ ಒಂದು ಲಿಂಕ್ ಕಳುಹಿಸಿ APK ಡೌನ್ಲೋಡ್ ಮಾಡಲು ತಿಳಿಸಿದಂತೆ ದೂರುದಾರರು ಲಿಂಕ್ ಮೂಲಕ APK ಪೈಲ್ ಡೌನ್ಲೋಡ್ ಮಾಡಿದ ತಕ್ಷಣ ದೂರುದಾರರ ಯೂನಿಯನ್ ಬ್ಯಾಂಕ್ ಖಾತೆಯಿಂದ ಸುಮಾರು ಒಟ್ಟು 2,35,000/- ರೂ ಹಣ ಹಾಗೂ ಕೆನರಾ ಬ್ಯಾಂಕ್ ನಿಂದ 1,48,000/- ರೂ ಹಣ ಹಂತ ಹಂತವಾಗಿ ಡೆಬಿಟ್ ಆಗಿರುವ ಬಗ್ಗೆ ಮೆಸೇಜ್ ಬಂದಿರುತ್ತದೆ. ದೂರುದಾರರಿಗೆ APK ಲಿಂಕ್ ಮೂಲಕ ವೈಯಕ್ತಿಕ ಮಾಹಿತಿಯನ್ನು ಕದ್ದು ಒಟ್ಟು ರೂ.3,83,000/- ಹಣ ವಂಚನೆಯಾಗಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Information