ಮುಂಬೈ ಡಿಸೆಂಬರ್ 18: ದಿನದಿಂದ ದಿನಕ್ಕೆ ಓಲಾ ಎಲೆಕ್ಟ್ರಿಕ್ ಕಂಪೆನಿಯ ಷೇರು ಬೆಲೆ ಕುಸಿಯುತ್ತಿದೆ. ಓಲಾ ಸ್ಕೂಟರ್ ಗಳ ಸೇಲ್ ಕೂಡ ಕಡಿಮೆಯಾಗುತ್ತಿದ್ದು, ಕಂಪೆನಿಯ ಯಾವುದೇ ಹೊಸ ಪ್ರಾಡಕ್ಟ್ ಗಳು ಕೂಡ ಮಾರುಕಟ್ಟೆ ಬರದೆ ಇದೀಗ ಓಲಾ ಕಂಪೆನಿಯ ಸ್ಥಿತಿ ಅದೋಗತಿಗೆ ಬಂದಿದೆ. ಈ ನಡುವೆ ಓಲಾ ಕಂಪೆನಿಯ ಸ್ಥಾಪಕ ಭವಿಶ್ ಅಗರ್ವಾಲ್ ತಮ್ಮ ಷೇರುಗಳ ದೊಡ್ಡ ಭಾಗವನ್ನು ಬೃಹತ್ ಒಪ್ಪಂದದ ಮೂಲಕ ಮಾರಾಟ ಮಾಡಿದ್ದಾರೆ.


ಓಲಾ ಕಂಪೆನಿ ಸಮಸ್ಯೆಗಳ ಮುಂದುವರೆಯುತ್ತಲೇ ಇದೆ. ಸ್ಕೂಟರ್ ಗಳನ್ನು ಮಾರಾಟ ಮಾಡಿ ಅದಕ್ಕೆ ಸರಿಯಾದ ಸರ್ವಿಸ್ ಕೊಡದೇ, ತನ್ನ ಮಾರಾಟವನ್ನೇ ಕಳೆದುಕೊಂಡಿದ್ದು, ಇನ್ನೂ ಓಲಾ ಸ್ಕೂಟರ್ ಪರ್ಚೇಸ್ ಮಾಡಿದವರು ಸರ್ವಿಸ್ ಮಾಡಿಸಲಾಗದೇ ಹಿಡಿಶಾಪ ಹಾಕುತ್ತಿದ್ದಾರೆ.
ಇದೀಗ ಕಂಪೆನಿಯ ಷೇರುಗಳ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಆರಂಭಿಕ ವಹಿವಾಟಿನಲ್ಲಿ, ಓಲಾ ಎಲೆಕ್ಟ್ರಿಕ್ ಷೇರುಗಳು ಸುಮಾರು 32.17 ರೂ.ಗಳ ವಹಿವಾಟು ನಡೆಸಿದ್ದು, ಸುಮಾರು ಶೇಕಡಾ 1 ರಷ್ಟು ಕುಸಿತ ಕಂಡಿದೆ.

ಕಳೆದ ಒಂದು ತಿಂಗಳಿನಿಂದ ಷೇರುಗಳು ಶೇಕಡಾ 19 ಕ್ಕಿಂತ ಹೆಚ್ಚು ಕುಸಿದಿವೆ ಮತ್ತು ಕಳೆದ ಮೂರು ತಿಂಗಳಲ್ಲಿ ಸುಮಾರು ಶೇಕಡಾ 41 ರಷ್ಟು ಕುಸಿದಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಅದು ಈಗ 52 ವಾರಗಳ ಕನಿಷ್ಠ ಮಟ್ಟವಾದ 32 ರೂ.ಗೆ ಹತ್ತಿರದಲ್ಲಿದೆ.

ಎಕ್ಸ್ಚೇಂಜ್ ಫೈಲಿಂಗ್ ಪ್ರಕಾರ, ಭವಿಶ್ ಅಗರ್ವಾಲ್ ಕಂಪನಿಯಲ್ಲಿನ ತಮ್ಮ ಷೇರಿನಲ್ಲಿ ಸುಮಾರು 4.2 ಕೋಟಿ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಈ ವಹಿವಾಟಿನ ಪ್ರಾಥಮಿಕ ಉದ್ದೇಶ 260 ಕೋಟಿ ರೂಪಾಯಿಗಳ ಪ್ರವರ್ತಕ ಮಟ್ಟದ ಸಾಲವನ್ನು ಸಂಪೂರ್ಣವಾಗಿ ಮರುಪಾವತಿಸುವುದಾಗಿತ್ತು. ಈ ಮಾರಾಟದ ನಂತರ, ಈ ಹಿಂದೆ ವಾಗ್ದಾನ ಮಾಡಿದ್ದ ಎಲ್ಲಾ ಷೇರುಗಳು, ಅಂದರೆ ಸುಮಾರು ಶೇಕಡಾ 3.93 ರಷ್ಟು ಷೇರುಗಳನ್ನು ಸಂಪೂರ್ಣವಾಗಿ ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ಸ್ಪಷ್ಟಪಡಿಸಿದೆ.

Share Information