Connect with us

LATEST NEWS

ನವೆಂಬರ್ 8 ರಂದು ಕಾಂಗ್ರೇಸ್ ನಿಂದ ಕರಾಳ ದಿನ ಆಚರಣೆ

ನವೆಂಬರ್ 8 ರಂದು ಕಾಂಗ್ರೇಸ್ ನಿಂದ ಕರಾಳ ದಿನ ಆಚರಣೆ

ಮಂಗಳೂರು ಅಕ್ಟೋಬರ್ 3: ಕೇಂದ್ರ ಸರಕಾರದ ನೋಟು ಅಮಾನ್ಯಗೊಳಿಸಿದ ಕ್ರಮವನ್ನು ಖಂಡಿಸಿ ಕಾಂಗ್ರೇಸ್ ಇದೇ ಬರುವ ನವೆಂಬರ್ 8 ರಂದು ಕರಾಳ ದಿನ ಆಚರಿಸಲಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಳೆದ ವರ್ಷ ನವೆಂಬರ್ 8 ರಂದು 500 ಹಾಗೂ 1000 ನೋಟುಗಳನ್ನು ರದ್ದುಗೊಳಿಸಿತ್ತು. ಈ ಹಿನ್ನಲೆಯಲ್ಲಿ ಇದೇ ನವೆಂಬರ್ 8 ರಂದು ಕಾಂಗ್ರೇಸ್ ನೋಟು ಅಮಾನ್ಯಗೊಳಿಸಿದ ಕ್ರಮವನ್ನು ಖಂಡಿಸಿ ಕರಾಳ ದಿನ ಆಚರಿಸಲಿದೆ.

ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅರಣ್ಯ ಸಚಿವ ರಮಾನಾಥ ರೈ 500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟು ಅಮಾನ್ಯ ಕ್ರಮ ದೇಶದ ಆರ್ಥಿಕ ಪರಿಸ್ಥಿತಿಯನ್ನೆ ಬುಡ ಮೇಲು ಮಾಡಿದೆ ಎಂದರು. ನೋಟು ಅಮಾನ್ಯದಿಂದ ಉಂಟಾಗಿದ್ದ ಸಮಸ್ಯೆಯಿಂದ ಜನರೂ ಈಗಲೂ ಪರದಾಡುತ್ತಿದ್ದಾರೆ ಎಂದು ಅವರು ಕೇಂದ್ರ ಸರಕಾರದ ವಿರುದ್ದ ಕಿಡಿಕಾರಿದರು.

ಕೇಂದ್ರ ಸರಕಾರದ ಇಂತಹ ಮೂರ್ಖತನದ ಕ್ರಮದಿಂದ ದೇಶದ ಕೋಟ್ಯಾಂತರ ಜನ ಇನ್ನೂ ಸಮಸ್ಯೆ ಎದುರಿಸುತ್ತಲೇ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು. ಈ ಹಿನ್ನಲೆಯಲ್ಲಿ ನವೆಂಬರ್ 8 ರಂದು ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಆ ದಿನವನ್ನು ಕರಾಳ ದಿನವಾಗಿ ಆಚರಿಸಲಾಗುವುದೆಂದು ಅವರು ಹೇಳಿದರು. ಕರಾಳ ದಿನದ ಅಂಗವಾಗಿ ನವೆಂಬರ್ 8 ರಂದು ಜಿಲ್ಲೆಯ ವಿವಿಧ ಕಡೆಗಳಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಕೇಂದ್ರ ಸರಕಾರದ ವಿರುದ್ದ ಪ್ರತಿಭಟನೆ ನಡೆಸಲಿದ್ದಾರೆ ಎಂದು ಅವರು ಹೇಳಿದರು.

ಮಂಗಳೂರಿಗೆ ಎ ಐ ಸಿ ಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಕೆ. ಸಿ ವೇಣುಗೋಪಾಲ್ ಇದೇ ನವೆಂಬರ್ 6 ರಂದು ಆಗಮಿಸಲಿದ್ದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು. ಅವರೊಂದಿಗೆ ಕೆಪಿಸಿಸಿ ರಾಜ್ಯಾಧ್ಯಕ್ಷ ಡಾ ಜಿ ಪರಮೇಶ್ವರ್ , ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

Facebook Comments

comments