Connect with us

    LATEST NEWS

    ಶ್ರೀಲಂಕಾ ಪ್ರಜೆಗಳು ರಾಜ್ಯಕ್ಕೆ ವಲಸೆ ಸಾಧ್ಯತೆ – ಎಚ್ಚರ ವಹಿಸಲು ಸೂಚನೆ

    ಮಂಗಳೂರು ಮೇ 13: ದಿವಾಳಿಯಾಗಿರುವ ಶ್ರೀಲಂಕಾದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಈ ಹಿನ್ನಲೆ ಶ್ರೀಲಂಕಾ ಪ್ರಜೆಗಳು ಸಮುದ್ರ ಮಾರ್ಗಗಳ ಮೂಲಕ ಭಾರತಕ್ಕೆ ವಲಸೆ ಬರುವ ಸಾಧ್ಯತೆ ಇದ್ದು, ಈ ಹಿನ್ನಲೆ ಮಂಗಳೂರು ಕರಾವಳಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.


    ಶ್ರೀಲಂಕಾ ಪ್ರಜೆಗಳು ಕರ್ನಾಟಕದ ಕರಾವಳಿಯ ಸಮುದ್ರ ಮಾರ್ಗದ ಮೂಲಕ ಒಳ ನುಸುಳುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸಬೇಕು ಎಂದು ಮಂಗಳೂರಿನ ಕರಾವಳಿ ಕಾವಲು ಪೊಲೀಸ್ ಠಾಣೆ ಎಚ್ಚರಿಕೆ ನೀಡಿದೆ.


    ಅಪರಿಚಿತ ವ್ಯಕ್ತಿಗಳಿಗೆ ಮನೆ ಬಾಡಿಗೆ ನೀಡುವ ಮುನ್ನ ಅವರ ಪೂರ್ವಾಪರ ಮಾಹಿತಿ ತಿಳಿದು ದಾಖಲೆ ಪಡೆದು, ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿರುವ ಕರಾವಳಿ ಕಾವಲು ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಅವರು ಈ ಸಂಬಂಧ ಉತ್ತರ ‘ದಕ್ಕೆ’ ಬಂದರಿನ ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘಕ್ಕೆ ಪತ್ರ ಕಳುಹಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply