LATEST NEWS
ದಕ್ಷಿಣಕನ್ನಡ ಜಿಲ್ಲೆಗೆ ಕೊರೊನಾ ಆಘಾತ…ನರ್ಸಿಂಗ್ ಕಾಲೇಜಿನ 40 ವಿಧ್ಯಾರ್ಥಿಗಳಿಗೆ ಕೊರೊನಾ ಸೊಂಕು
ಮಂಗಳೂರು ಫೆಬ್ರವರಿ 3: ದಕ್ಷಿಣಕನ್ನಡ ಜಿಲ್ಲೆಗೆ ಮತ್ತೆ ಕೊರೊನಾ ಆಘಾತ ನೀಡಿದ್ದು, ಮಂಗಳೂರು ನಗರ ಹೊರವಲಯ ಉಳ್ಳಾಲದ ನರ್ಸಿಂಗ್ ಕಾಲೇಜು ಒಂದರಲ್ಲಿ 40 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ಕಂಡುಬಂದಿದೆ.
ಉಳ್ಳಾಲದ ಆಲಿಯಾ ನರ್ಸಿಂಗ್ ಕಾಲೇಜಿನಲ್ಲಿ 100 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು ಈ ಪೈಕಿ 40 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ಕಂಡುಬಂದಿದೆ. 40 ವಿದ್ಯಾರ್ಥಿಗಳು ಕೂಡ ಕೇರಳದಿಂದ ಶಿಕ್ಷಣಕ್ಕಾಗಿ ಆಗಮಿಸಿದ್ದರು.
ವಿದ್ಯಾರ್ಥಿಗಳು ಕಾಲೇಜಿನ ಹಾಸ್ಟೆಲ್ ನಲ್ಲೇ ಉಳಿದುಕೊಂಡು ನರ್ಸಿಂಗ್ ಶಿಕ್ಷಣ ಪಡೆಯುತ್ತಿದ್ದರು. ಸದ್ಯ ಬಹಳಷ್ಟು ಮಂದಿ ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದ್ದರಿಂದ ಕಾಲೇಜು ಮತ್ತು ಹಾಸ್ಟೆಲ್ ಅನ್ನು ಸೀಲ್ ಡೌನ್ ಮಾಡಿದ್ದು ಪ್ರವೇಶ ನಿರ್ಬಂಧಿಸಲಾಗಿದೆ. ಆ ಜಾಗವನ್ನು ಕಂಟೈನ್ ಮೆಂಟ್ ಝೋನ್ ಆಗಿ ಜಿಲ್ಲಾಡಳಿತ ಘೋಷಿಸಿ ನಿರ್ಬಂಧ ಹೇರಿದೆ. ಅಲ್ಲಿನ ವಿದ್ಯಾರ್ಥಿಗಳು ಮತ್ತು ಸಿಬಂದಿ ಹೊರಬರುವಂತಿಲ್ಲ. ಅಲ್ಲಿಗೆ ಹೊರಗಿನ ಸಿಬಂದಿಯಾಗಲೀ, ವಿದ್ಯಾರ್ಥಿಗಳಾಗಲೀ ಹೋಗುವಂತಿಲ್ಲ.