Connect with us

LATEST NEWS

ನಗ್ನ ಪ್ರೀ-ವೆಡ್ಡಿಂಗ್ ಫೋಟೋಶೂಟ್ ವೈರಲ್!

ಮಂಗಳೂರು, ಡಿಸೆಂಬರ್ 30: ಇತ್ತೀಚಿನ ದಿನಗಳಲ್ಲಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಫೋಟೋಶೂಟ್ ನಲ್ಲು ಹೊಸ ಬಗೆ, ಹೊಸ ಆಕರ್ಷಣೆ, ಚಿತ್ರ ವಿಚಿತ್ರ ಪರಿಕಲ್ಪನೆಗಳು ಬಂದಿದೆ.

ಆದರೆ, ಇಲ್ಲೊಂದು ಜೋಡಿ ಎಲೆಯಲ್ಲಿ ಮೈ ಮುಚ್ಚಿಕೊಂಡು ಮಾಡಿಸಿದ ಪೋಟೋಶೂಟ್ ಹಲವರ ಕೆಂಗಣ್ಣಿಗೆ ಗುರಿಯಾಗಿದೆ.

Asterisc Photography ಎಂಬ ಫೇಸ್ ಬುಕ್ ಪೇಜ್ ನಲ್ಲಿ ಹರಿದಾಡುತ್ತಿರುವ ಈ ಪೋಟೋಗಳಲ್ಲಿ ನಗ್ನವಾಗಿರುವ ಹುಡುಗ-ಹುಡುಗಿ ಕೇವಲ ಬಾಳೆಎಲೆ ಬಳಸಿ ಮೈ ಮುಚ್ಚಿಕೊಂಡಿದ್ದಾರೆ.

ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೋಲ್ ಆಗಿದ್ದು, ಪೋಟೋ ಇಷ್ಟೇನಾ ಮುಂದಿನದ್ದು ಎಲ್ಲಿ? ಎಂದು ಟ್ರೋಲಿಗರು ತಮ್ಮ ಚಿತ್ರ ವಿಚಿತ್ರ ಟ್ರೋಲ್ ಗಳ ಮೂಲಕ ಈ ಜೋಡಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.